ನಾಳೆ ಕನಕ ಜಯಂತಿ
ಹೊಸಪೇಟೆ: ಭಕ್ತಶ್ರೇಷ್ಠ ಕನಕದಾಸ ಜಯಂತಿ ಇಲ್ಲಿನ ಎಂ.ಪಿ. ಪ್ರಕಾಶ್ ಕಲಾಮಂದಿರದಲ್ಲಿ ನ. 20ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಹಂಪಿಯಿಂದ ಬರುವ ಜ್ಯೋತಿ ಸ್ವಾಗತಿಸಿ, ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ಎಂ.ಪಿ. ಪ್ರಕಾಶ್ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಸಂಸದೆ ಜೆ. ಶಾಂತಾ, ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ತಾಪಂ ಅಧ್ಯಕ್ಷೆ ತಾರೀಹಳ್ಳಿ ಹಾಲಮ್ಮ, ಜಿಪಂ ಸದಸ್ಯೆ ಅನಿತಾ ಆನಂದ್, ಅನ್ನದಾನ ರೆಡ್ಡಿ, ಸುಮಂಗಳಮ್ಮ ಗುಬಾಜಿ, ತಪ್ಪೀಬಾಯಿ ಠಾಕ್ರಾನಾಯ್ಕ, ಎಪಿಎಂಸಿ ಅಧ್ಯಕ್ಷ ಪುರುಷೋತ್ತಮ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಸಹಾಯಕ ಆಯುಕ್ತ ಪಿ. ಸುನೀಲ್ಕುಮಾರ್, ಡಿವೈಎಸ್ಪಿ ಡಿ.ಡಿ. ಮಾಳಿಗಿ, ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ಹಾಲಪ್ಪ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಜಿ. ಭರಮಲಿಂಗನಗೌಡ, ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಖಜಾಂಚಿ ಆರ್. ಕೊಟ್ರೇಶ್, ನಗರಸಭಾ ಸದಸ್ಯ ಚಿದಾನಂದಪ್ಪ, ಜಿ. ರಾಮಚಂದ್ರಗೌಡ, ಜಿಪಂ ಮಾಜಿ ಸದಸ್ಯ ಎಲ್. ಸಿದ್ದನಗೌಡ, ವಕೀಲ ಕುರುಬರ ಯಂಕಪ್ಪ, ನಗರಸಭಾ ಮಾಜಿ ಉಪಾಧ್ಯಕ್ಷ ಅಯ್ಯಾಳಿ ಮೂರ್ತಿ, ಕನಕ ಯುವಸೇನೆ ಅಧ್ಯಕ್ಷ ಮೃತ್ಯುಂಜಯ ಹೆಬ್ಬುಲಿ ಭಾಗವಹಿಸುವರು. ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು ಎಂದು ತಹಸೀಲ್ದಾರ್ ರಮೇಶ್ ಕೋನರೆಡ್ಡಿ, ತಾಪಂ ಇಒ ರಮೇಶ್ ತಳವಾರ್, ನಗರಸಭಾ ಪೌರಾಯುಕ್ತ ಮಹಮ್ಮದ್ ಮುನೀರ್ ತಿಳಿಸಿದ್ದಾರೆ.
ನೆಹರು ಜನ್ಮದಿನಾಚರಣೆ
ಬಳ್ಳಾರಿ: ಜವಾಹರಲಾಲ್ ನೆಹರು ಜನ್ಮದಿನವನ್ನು ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಜೆ.ಎಸ್. ಆಂಜನೇಯಲು ದಿ. ನೆಹರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಲ್ಲುಕಂಬ ಪಂಪಾಪತಿ, ಆರ್. ಪ್ರಭಾಕರ, ಬಿ. ಅಲ್ಲಾಭಕ್ಷ, ಬಿ. ನಾಗರಾಜಗೌಡ, ರಿಜ್ವಾನ್ ಕರ್ನೂಲಿ, ಖುರ್ಷಿದ್ ಬಾನು ಇದ್ದರು.
ಮನೆ ಕಳ್ಳತನ: ದೂರು
ಬಳ್ಳಾರಿ: ಬೀಗ ಹಾಕಿಕೊಂಡು ಮದುವೆಗೆ ಹೋಗಿದ್ದ ಮನೆಯ ಬೀಗ ಮುರಿದು ಮನೆಯಲ್ಲಿದ್ದ ರು. 1.8 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಭಾನುವಾರ ನಡೆದಿದೆ. ನೇತಾಜಿ ನಗರದಲ್ಲಿರುವ ವೀರೇಶ್ ಎನ್ನುವವರು ಆಂಧ್ರದ ಭೀಮಾವರಂಗೆ ಅವರ ಸಂಬಂಧಿ ಮದುವೆಗೆ ಹೋದಾಗ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಮನೆಯ ಬೀಗ ಮುರಿದು ಮನೆಯಲ್ಲಿದ್ದ 1.5 ಕೆಜಿ ಬೆಳ್ಳಿ, 50 ಗ್ರಾಂ ಬಂಗಾರ, ರು. 20 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮುರುಗಣ್ಣನವರ್, ಇನ್ಸ್ಪೆಕ್ಟರ್ ಎಂ.ಬಿ. ಗೋಳಸಂಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶ್ವಾನದಳ ಪರಿಶೀಲನೆ ನಡೆಸಿತು.