ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಸ್ಸಿನಲ್ಲೇ ಗಂಡು ಮಗು ಜನನ!

Lingaraj Badiger
Updated On : 19 Nov 2013, 10:45 am

ಬಳ್ಳಾರಿ: ನೀವು ಹಲವು ಬಾರಿ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ಆಗಿದ್ದನ್ನು ನೋಡಿದ್ದೀರಿ, ಕೇಳಿದ್ದೀರಿ. ಆದರೆ ಸೋಮವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಓರ್ವ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಘಟನೆ ನಡೆದಿದ್ದು ಬಳ್ಳಾರಿಯ ಬೆಳಗಲ್ ಕ್ರಾಸ್‌ನಲ್ಲಿ. ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸರ್ಕಾರಿ ಬಸ್ಸಿನಲ್ಲಿ ಕರೆದುಕೊಂಡು ಹೋಗುವಾಗ ಬಸ್ಸಿನಲ್ಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ 1 ಗಂಟೆ ನಂತರ ಅದೇ ಬಸ್ಸಿನಲ್ಲಿ ಇದ್ದ ಸೂಲಿಗಿತ್ತಿಯ ಸಹಾಯದಿಂದ ಹೆರಿಗೆಯಾಗಿದೆ. ನಂತರ ತಾಯಿ ಮತ್ತು ಮಗುವನ್ನು  ಆ್ಯಂಬುಲೆನ್ಸ್‌ನಲ್ಲಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ.
ಸುರಕ್ಷಿತ ಹೆರಿಗೆ: ತಾಲೂಕಿನ ಹರಗಿನಡೋಣಿ ನಿವಾಸಿ ಯನ್ನಪ್ಪ ಮತ್ತು ಬೆಂಕೆಮ್ಮ ದಂಪತಿ ಪುತ್ರಿ ಗೌರಮ್ಮನಿಗೆ 9 ತಿಂಗಳು ಪೂರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹರಗಿನಡೋಣಿಯಿಂದ ಬಳ್ಳಾರಿಗೆ ಬಸ್ಸಿನಲ್ಲಿ ಬರುವಾಗ ಬೆಳಗಲ್ ಕ್ರಾಸ್ ಸಮೀಪಿಸುತ್ತಿದ್ದಂತೆ ಹೆರಿಗೆ ನೋವು ಆರಂಭವಾಗಿದೆ. ಆಗ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸೂಲಗಿತ್ತಿಯ ಸಹಾಯದಿಂದ ಬಸ್ಸಿನಲ್ಲಿ ಹೆರಿಗೆಯಾಗಿದೆ.
ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರಿಂದ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವಿಮ್ಸ್‌ನಲ್ಲಿ ವೈದ್ಯರು ಪರಿಶೀಲಿಸಿ, ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ಹೇಳಿದಾಕ್ಷಣ ಗೌರಮ್ಮ ಮತ್ತು ಅವರ ಪೋಷಕರು ನಿಟ್ಟುಸಿರು ಬಿಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement