ಬಸ್ನಲ್ಲೇ ಗಂಡು ಮಗುವಿಗೆ ಜನ್ಮ
ಕನ್ನಡಪ್ರಭ ವಾರ್ತೆ , ಬಳ್ಳಾರಿ , ನ.18
ನೀವು ಹಲವು ಬಾರಿ ಆ್ಯಂಬುಲೆನ್ಸ್ನಲ್ಲಿ ಹೆರಿಗೆ ಆಗಿದ್ದನ್ನು ನೋಡಿದ್ದೀರಿ, ಕೇಳಿದ್ದೀರಿ. ಆದರೆ ಸೋಮವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಘಟನೆ ನಡೆದಿದ್ದು ಬಳ್ಳಾರಿಯ ಬೆಳಗಲ್ ಕ್ರಾಸ್ನಲ್ಲಿ. ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸರ್ಕಾರಿ ಬಸ್ಸಿನಲ್ಲಿ ಕರೆದುಕೊಂಡು ಹೋಗುವಾಗ ಬಸ್ಸಿನಲ್ಲೇ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ಸನ್ನು ಅಲ್ಲಿಯೇ ನಿಲ್ಲಿಸಿ 1 ಗಂಟೆ ನಂತರ ಅದೇ ಬಸ್ಸಿನಲ್ಲಿ ಇದ್ದ ಸೂಲಿಗಿತ್ತಿಯ ಸಹಾಯದಿಂದ ಹೆರಿಗೆಯಾಗಿದೆ.
ನಂತರ ತಾಯಿ ಮತ್ತು ಗಂಡು ಮಗುವನ್ನು ಆ್ಯಂಬ್ಯುಲೆನ್ಸ್ನಲ್ಲಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ.