ಅನುದಾನ ಬಿಡುಗಡೆ ಫಲ ಭೀಮಾನಾಯ್ಕರದ್ದು
ಕೊಟ್ಟೂರು: ಪಟ್ಟಣದ ಅಭಿವೃದ್ಧಿಗೆ ಶಾಸಕ ಭೀಮಾನಾಯ್ಕ ಹೆಚ್ಚು ಮುತುವರ್ಜಿ ವಹಿಸಿ ರು. 5 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾರ್ಯ ಮಾಡಲು ಮುಂದಾಗಿದ್ದರೆ ಈ ಅನುದಾನದ ಬಿಡುಗಡೆ ಫಲ ಹಿಂದಿನ ಶಾಸಕ ಕೆ. ನೇಮಿರಾಜ್ ನಾಯ್ಕರಿಗೆ ಸೇರಬೇಕೆಂದು ಬಿಜೆಪಿ ಪಪಂ ಸದಸ್ಯ ಚಿರಿಬಿ ಕೊಟ್ರೇಶ್ ಹೇಳಿರುವುದು ಬಾಲಿಶವಾದು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಎನ್. ಗೋಪಿ ಹೇಳಿದರು.
ಮಾಜಿ ಶಾಸಕ ನೇಮಿರಾಜ್ ನಾಯ್ಕ ಪಟ್ಟಣದ ಜತೆಗೆ ಬರೀ ಸುಳ್ಳಿನ ಭರವಸೆ ನೀಡುತ್ತಾ ಕಾಲ ಕಳೆದರು. ಈ ಕಾರಣಕ್ಕಾಗಿಯೇ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಜನತೆ ಪರಾಭವಗೊಳಿಸಿದರು ಎಂದರು.