ಶತಾಯುಷಿ ಕಾಳಮ್ಮ ನಿಧನ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದ ಶತಾಯುಷಿ ಪಟ್ಟಣಶೆಟ್ಟಿ ಕಾಳಮ್ಮ (104) ಬುಧವಾರ ನಿಧನರಾಗಿದ್ದಾರೆ. ಮೃತರಿಗೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಅಂತ್ಯಕ್ರಿಯೆ ಸಂಜೆ ಅವರ ತೋಟದಲ್ಲಿ ನೆರವೇರಿತು. ಶಾಸಕ ಎಸ್. ಭೀಮಾನಾಯ್ಕ, ಮುಖಂಡರಾದ ಹೂಗಾರ ಮಲ್ಲಿಕಾರ್ಜುನ, ಕೊಗಳಿ ಸಿದ್ದಲಿಂಗನಗೌಡ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಗ್ರಾಮದ ಮುಖಂಡರಾದ ಜಿ. ಬಸವರಾಜಪ್ಪ, ಬಿ. ತೋಟಪ್ಪ, ಗಂಗಾಧರಗೌಡ, ಬಿ. ಕೊಟ್ರೇಶ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.