ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶ್ರಮವಹಿಸಿ ಕೆಲಸ ಮಾಡಿ: ಉದಯ್ ಜನ್ನು ಮನವಿ

Lingaraj Badiger
Updated On : 22 Nov 2013, 11:56 am

ಕೂಡ್ಲಿಗಿ: ಮುಂಬರುವ ಲೋಕಸಭಾ ಚುನಾವಣೆಗೆ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು ಕಾರ್ಯಕರ್ತರಿಗೆ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷದ ವತಿಯಿಂದ ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡುವ ಕೆಲಸವಾಗಲಿ ಎಂದು ಹೇಳಿದರು.
ಪ.ಪಂಗಡ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎನ್. ಮುದ್ದಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರೆ ಕಾರ್ಮಿಕ ಖಾತೆ ಸಚಿವರಾಗಿರುವುದರಿಂದ ಕಾರ್ಮಿಕರ ಸವಲತ್ತುಗಳನ್ನು ಅವರಿಗೆ ಮುಟ್ಟಿಸಲು ಕಾರ್ಮಿಕ ಘಟಕದವರು ಶ್ರಮಿಸಬೇಕು ಎಂದು ತಿಳಿಸಿದರು.
ತಾಲೂಕು ಪ.ಪಂಗಡ ಘಟಕದ ಅಧ್ಯಕ್ಷ ಸಿ.ಬಿ. ಜಯರಾಂ ನಾಯಕ, ಪಪಂ ಮಾಜಿ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಬುಟ್ಟ ಶಿವಕೃಷ್ಣ, ಎಚ್. ವೀರಭದ್ರಪ್ಪ, ಕ್ಯಾರಿ ರಮೇಶ್, ಕುಮಾರಸ್ವಾಮಿ, ಬುಟ್ಟ ತಿಪ್ಪೇಸ್ವಾಮಿ, ರಾಜೀವ ಗಾಂಧಿ ಯುವಸೇನೆ ಅಧ್ಯಕ್ಷ ಎಲ್. ರವಿ, ಡಿ.ಎಚ್. ದುರುಗೇಶ್, ಸಂಜೀವ್, ವಾಮೇಶ್, ದೇವಕುಮಾರ್, ರಾಜು, ದುರುಗಪ್ಪ, ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement