ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುಲಭವಾಗಿ ಗಣಿತ ಕಲಿಸಿ

Lingaraj Badiger
Updated On : 22 Nov 2013, 11:56 am

ಕೊಟ್ಟೂರು:  ಶೈಕ್ಷಣಿಕ ಸಾಧನೆಯಲ್ಲಿ ಗಣಿತ ವಿಷಯವನ್ನು ಪ್ರಮುಖ ಅಳತೆಗೋಲನ್ನಾಗಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗಣಿತವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಸಿಕೊಡುವಲ್ಲಿ ಶಿಕ್ಷಕರು ಸದಾ ತೊಡಗಿಸಿಕೊಂಡರೆ ಎಂದೆಂದೂ ಕಷ್ಟವಾಗಿ ಯಾವುದೇ ವಿದ್ಯಾರ್ಥಿಗೆ ಪರಿಣಮಿಸುವುದಿಲ್ಲ ಎಂದು ಕೂಡ್ಲಿಗಿ ಬಿಇಒ ಎಂ.ಆರ್. ಮಂಜುನಾಥ ಹೇಳಿದರು.
ಮಹಾದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕೂಡ್ಲಿಗಿ ತಾಲೂಕು ಮಟ್ಟದ ಗಣಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಪ್ರತಿ ವಿಷಯಗಳು ವಿದ್ಯಾರ್ಥಿಗಳಿಗೆ ಮುಖ್ಯ. ಅದರಲ್ಲೂ ಗಣಿತ ವಿಷಯ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ ಎಂಬಂತೆ ಬಿಂಬಿತವಾಗಿದೆ. ಈ ವಿಷಯವನ್ನೇ ಸವಾಲಾಗಿರಿಸಿಕೊಂಡು ಶಿಕ್ಷಕರು ಕಾರ್ಯಗಾರದ ಸದುಪಯೋಗ ಪಡೆದು ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವಂತೆ ತಯಾರು ಮಾಡಬೇಕು. ಆ ಮೂಲಕ ಶೈಕ್ಷಣಿಕ ಸಾಧನೆ ತೋರಬೇಕು ಎಂದರು.
ಪ್ರೌಢಶಾಲೆ ಮುಖ್ಯಗುರು ಬಸಾಪುರ ಪಂಪಾಪತಿ ಮಾತನಾಡಿ, ಗಣಿತ ವಿಷಯ ಮಕ್ಕಳಿಗೆ ಆಂತರಿಕ ಭಯ ಹುಟ್ಟುಹಾಕಿದೆ. ಅದರೆ ಗಣಿತ ವಿಷಯ ನಿಜಕ್ಕೂ ಪೆಡಂಭೂತ ಅಲ್ಲವೇ ಅಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕಾ ಮನೋಭಾವ ವಿಸ್ತಾರಗೊಳ್ಳಬೇಕು. ಆಗ ಮಾತ್ರ ಗಣಿತ ನಿಜವಾಗಲೂ ಸುಲಭ ವಿಷಯವಾಗಿ ಪರಿಣಮಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಗಣೇಶ್ ಕಾರ್ಯಗಾರದಲ್ಲಿ ಶಿಕ್ಷಕರಿಗೆ ವಿಶೇಷ ಉಪನ್ಯಾಸ ನೀಡಿದರು. ವಿವಿಧ ಪ್ರೌಢಶಾಲೆಗಳ ಮುಖ್ಯಶಿಕ್ಷಕರಾದ ಶಕುಂತಲಾ, ಶಂಕರಪ್ಪ, ನಾಗೇಂದ್ರಪ್ಪ, ಬಸವರಾಜ, ಪರಿಣಳಾ, ಬಸಯ್ಯ, ಗೌಡಜ್ಜ ಪಾಲ್ಗೊಂಡಿದ್ದರು. ಶಿಕ್ಷಕ ಗೋವಿಂದರಾಜ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement