ಉಚಿತ ಉಪಕರಣ ವಿತರಣೆ
ಬಳ್ಳಾರಿ: ಜಿಲ್ಲಾ ಪಂಚಾಯಿತಿ (ಖಾಗ್ರಾ) ವತಿಯಿಂದ ಜಿಲ್ಲಾ ವಲಯ ಯೋಜನೆಯಡಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಜಾಪುರ ಮತ್ತು ಹೊಸಹಳ್ಳಿ ಕ್ಷೇತ್ರದ ಗ್ರಾಮಾಂತರ ಕಸುಬುದಾರರಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು. ಕೂಡ್ಲಿಗಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪಿ. ಚನ್ನಬಸವನಗೌಡ, ತಾಪಂ ಅಧ್ಯಕ್ಷೆ ವಿ. ಮಂಗಳಮ್ಮ ಚಿನ್ನಾಪುರಪ್ಪ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೊಟ್ರೇಶಪ್ಪ ಉಪಕರಣ ವಿತರಿಸಿದರು. ಈ ಸಂದರ್ಭದಲ್ಲಿ ಜಿಪಂ (ಖಾಗ್ರಾ) ಉಪ ನಿರ್ದೇಶಕ ಕೆ. ಮೊಹಮ್ಮದ್ ಇರ್ಫಾನ್, ಕೂಡ್ಲಿಗಿ ತಾಪಂ ಇಒ ಬಿ.ಆರ್. ಶಿವಪ್ಪ, ತಹಸೀಲ್ದಾರ್ ಜವರೇಗೌಡ, ಪ್ರಭಾರಿ ಕೈಗಾರಿಕಾ ವಿಸ್ತರಣಾಧಿಕಾರಿ ದಾದಾಪೀರ್ ಇದ್ದರು.