ರಂಜಾನ್ಸಾಬ್ ಅಪ್ಪಟ ಕನ್ನಡಿಗ: ಡಾ. ದೇವಣ್ಣ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 24
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಕಪ್ಪಗಲ್ಲು ರಂಜಾನ್ಸಾಬ್ ಓರ್ವ ಅಪ್ಪಟ ಕನ್ನಡಿಗ ಎಂದು ಉಪನ್ಯಾಸಕ ಡಾ.ಸಿ. ದೇವಣ್ಣ ಅಭಿಪ್ರಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಸಾಪ ಮೋಕ ಹೋಬಳಿ ಘಟಕಾಧ್ಯಕ್ಷ ಕೆ. ಭುವನೇಶ್ ಮಾತನಾಡಿ, ಕಪ್ಪಗಲ್ಲು ರಂಜಾನ್ಸಾಬ್ ಅಂತಹ ಬಲಿದಾನಿಗಳಿಂದಾಗಿ ಇಂದು ಅಖಂಡ ಕರ್ನಾಟಕ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಬಳ್ಳಾರಿ ಗ್ರಾಮೀಣ ಅಧ್ಯಕ್ಷ ಈ. ಗೋವರ್ಧನ ರೆಡ್ಡಿ, ಶಿಕ್ಷಕಿ ಹುಲುಗಮ್ಮ, ರುಕ್ಮಿಣಿ, ಮಧುಸೂದನ್, ಪೂರ್ಣಿಮಾ, ಭರಮನಗೌಡ ಸೇರಿದಂತೆ ಮತ್ತಿತರರು ಇದ್ದರು.