ಇಂದು ವಿಚಾರ ಸಂಕಿರಣ
ಹೊಸಪೇಟೆ: ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ಮಹಿಳಾ ಘಟಕ, ಹೊಸಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸ್ಥಳೀಯ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಕಾನೂನು ದಿನಾಚಾರಣೆ ಅಂಗವಾಗಿ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ನ. 26ರಂದು ಬೆಳಗ್ಗೆ 10.30ಕ್ಕೆ ಸಂವಿಧಾನ ಮತ್ತು ಮಹಿಳಾ ಹಕ್ಕುಗಳ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸುವರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶ ಮಾರುತಿ ಎಸ್. ಬಾಗಡೆ, ಕೆ. ನಾರಾಯಣ ಪ್ರಸಾದ್, ಹತ್ತಿಕಾಳು ಪ್ರಭು ಸಿದ್ದಪ್ಪ, ಎ. ಈರಣ್ಣ, ಪಿ. ಸುನೀಲ್ ಕುಮಾರ್, ರಮೇಶ್ ಕೋನರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಕೆ. ರತ್ನಾಕರ್ ರಾವ್, ಕಾರ್ಯದರ್ಶಿ ಕೊಟ್ರೇಶ್ ಹಿರೇಮಠ, ಮಹಮ್ಮದ್ ಮುನೀರ್, ಸೈಯದ್ ಮಹಮ್ಮದ್, ಡಾ. ಸುಲೋಚನಾ, ಸುನೀಲ್ ಇತರರು ಉಪಸ್ಥಿತರಿರುವರು.