ಯುವ ಶಕ್ತಿ ಸಮಾಜಮುಖಿಯಾಗಿ ಬೆಳೆಯಲಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ.25
ನಾಡು, ನುಡಿ, ನೆಲ ಸಂಪತ್ತು ಜಲದ ಪ್ರೀತಿಯೊಂದಿಗೆ ಸಮಾಜಮುಖಿಯಾಗಿ ಬೆಳೆಯಲು ಯುವ ಶಕ್ತಿ ಮುಂದಾಗಬೇಕು ಎಂದು ಕಸಾಪ ಮಾಜಿ ಅಧ್ಯಕ್ಷೆ ಸುಜಾತಾ ರೇವಣಸಿದ್ಧಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸಂಜೆ ಹೊಸಪೇಟೆಯ ಬಲಿಜ ಯುವ ಸೇನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಲಿಜ ಸಮಾಜದ ಹಿರಿಯ ಮುಖಂಡ ಹನುಮಂತಪ್ಪ ಮಾತನಾಡಿ, ಯುವಕರು ಹಿರಿಯರ ಮಾರ್ಗದರ್ಶನದೊಂದಿಗೆ ಬೆಳೆಯಬೇಕಾಗಿದೆ. ಆರ್ಥಿಕವಾಗಿ ಸಬಲರಾದವರು ದುರ್ಬಲರಿಗೆ ನೆರವು ನೀಡಿ ಸಮಾಜವನ್ನು ಸದೃಢಗೊಳಿಸಲು ಮುಂದಾಗಬೇಕು ಎಂದರು.
ಉದ್ಯಮಿ ನರಸಿಂಹಮೂರ್ತಿ, ನಗರಸಭಾ ಸದಸ್ಯ ಶ್ರೀಧರ ನಾಯ್ಡು, ತಾಲೂಕು ಬಲಿಜ ಸಂಘದ ಅಧ್ಯಕ್ಷ ಶಿವಪ್ಪ, ಆರ್.ಕೆ. ರವಿ. ಗೀತಮ್ಮ, ಬಲಿಜ ಯುವಸೇನೆಯ ಸಂಸ್ಥಾಪಕ ಎನ್.ಟಿ. ರಾಜು, ಯುವಸೇನೆಯ ಅಧ್ಯಕ್ಷ ಭೋಜರಾಜ, ಕಾರ್ಯದರ್ಶಿ ಕೆ. ವೀರಣ್ಣ, ಖಚಾಂಚಿ ಜಗದೀಶ ಇತರೆ ಪದಾಧಿಕಾರಗಳು ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.