ಸಂಸ್ಥಾಪಕರ ದಿನಾಚರಣೆ
ಬಳ್ಳಾರಿ: ಸ್ಥಳೀಯ ರಾಘವ ಕಲಾ ಮಂದಿರದಲ್ಲಿ ಸಂಸ್ಥಾಪಕರ (ಜೆ.ಫಂಡರಿನಾಥ) ದಿನಾಚರಣೆ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಬಳ್ಳಾರಿಯ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಸಿದ್ಧನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಸಂಸ್ಥೆಯ ಸಂಸ್ಥಾಪಕ ಫಂಡರಿನಾಥರು ಉತ್ತಮ ಸಾಹಿತಿ, ನಿರ್ದೇಶಕ ಹಾಗೂ ನಟರಾಗಿ ರಂಗಭೂಮಿಗೆ ಅಪಾರ ಸೇವೆ ಸಲ್ಲಿಸಿದ್ದರು. ಅಂಥವರ ಮಾರ್ಗದರ್ಶನದಿಂದಲೇ ಸಂಸ್ಥೆ ಮನ್ನಡೆಯುತ್ತಿದೆ ಎಂದು ಸ್ಮರಿಸಿದರು.
ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಯಶ್ವಂತ್ ಭೂಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾಪೋಷಕರ ಸ್ಮರಣೆಯೂ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಉತ್ತಮ ಕಾರ್ಯ ಕೈಗೊಂಡಿದೆ ಎಂದರು.
ಬಳ್ಳಾರಿಯ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಹಂದ್ಯಾಳ್ ಶ್ರೀಮಹಾದೇವತಾತ ಕಲಾಸಂಘ ತಂಡದಿಂದ ಅಭಿನಯಿಸಿದ ಪಂಚಗಲ್ ಬಸವರಾಜ ರಚನೆ ಹಾಗೂ ಕಲಾವಿದ ಪುರುಷೋತ್ತಮ ಹಂದ್ಯಾಳ್ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಮೋಹಿನಿ ಭಸ್ಮಾಸುರ ಎಂಬ ಸುಂದರ ಪೌರಾಣಿಕ ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.
ಡಾ. ಎ. ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ಡಾ. ಕೆ. ಸುರೇಂದ್ರಬಾಬು ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಪಿ. ಗಾದೆಪ್ಪ ವಂದಿಸಿದರು.