ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸದಾಶಿವ ವರದಿ ಶಿಫಾರಸಿಗೆ ಒತ್ತಾಯ: ಬಾಬುಜಿ ವೇದಿಕೆ

Lingaraj Badiger
Updated On : 28 Nov 2013, 11:14 am

ಬಳ್ಳಾರಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ನೀಡಿ, ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಡಾ. ಬಾಬು ಜಗಜೀವನ್‌ರಾಂ ಜನಜಾಗೃತಿ ವೇದಿಕೆ ಜಿಲ್ಲಾ ಶಾಖೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಎಸ್ಸಿ ಪಟ್ಟಿಗೆ ಸೇರಿದ ಸ್ಪರ್ಶ ಸಮುದಾಯಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸೇರಿದಂತೆ ಅವುಗಳ ಉಪ ಜಾತಿಗಳವರನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕು. ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಜನ್ಮದಿನವಾದ ಏ. 5ರಂದು ಸರ್ಕಾರಿ ರಜೆಯನ್ನಾಗಿ ಘೋಷಿಸಬೇಕು. ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಗೆ ಡಾ. ಬಾಬು ಜಗಜೀವನರಾಂ ಹೆಸರಿಡಲು ಪ್ರಸಕ್ತ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು  ವೇದಿಕೆಯ ಜಿಲ್ಲಾಧ್ಯಕ್ಷ ಜೆ. ಸುಂಕಣ್ಣ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಪಂಪಾಪತಿ, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಎಚ್.ಎಸ್. ಗಾದಿಲಿಂಗಪ್ಪ, ಎಚ್. ಕೆಂಚಪ್ಪ, ಶ್ರೀನಿವಾಸ, ಎಚ್. ಭೀಮಲಿಂಗಪ್ಪ, ಬಿ.ಎಸ್. ಗಂಗಾಧರ, ಆರ್. ಗೂಳಪ್ಪ, ಎಸ್. ಫಕ್ಕೀರಯ್ಯ, ಎಚ್. ಶಂಕ್ರಪ್ಪ, ಎಚ್. ಈರಣ್ಣ, ಎಚ್. ವೀರೇಶ್, ವೈ. ಅರುಣಾಚಲಂ, ಎಚ್. ಹುಲುಗಪ್ಪ, ಎಂ. ದೊಡ್ಡವೀರೇಶ್, ಜಗನ್ನಾಥ, ದುರುಗೇಶ್, ಸಾಸಲವಾಡು ಶಿವಣ್ಣ, ಎಚ್. ರಮೇಶ್, ವೈ. ಅಂಬರೀಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement