ಪರಾರಿಯಾಗಿದ್ದ ಕೈದಿ ಬಂಧನ
ಕನ್ನಡಪ್ರಭ ವಾರ್ತೆ ಬಳ್ಳಾರಿ ನ.28
ನವೆಂಬರ್ 1ರಂದು ಬಳ್ಳಾರಿ ಕೇಂದ್ರ ಕಾರಾಗೃಹದ ಗೋಡೆ ಹಾರಿ ಪರಾರಿಯಾಗಿದ್ದ ಇಬ್ಬರು ವಿಚಾರಣಾಧೀನ ಕೈದಿಗಳ ಪೈಕಿ ರೇವಣ್ಣ ಎನ್ನುವ ವಿಚಾರಣಾಧೀನ ಕೈದಿಯನ್ನು ಬಾಗಲಕೋಟೆ ಪೊಲೀಸರ ನೆರವಿನೊಂದಿಗೆ ಬಳ್ಳಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೇವಣ್ಣ ಮತ್ತು ಅಯ್ಯಾಳಪ್ಪ ಎಂಬ ಕೈದಿಗಳು ಪರಾರಿಯಾಗಿದ್ದರು. ಅವರಲ್ಲಿ ರೇವಣ್ಣ ಎಂಬಾತನನ್ನು ಬಿಜಾಪುರ ಜಿಲ್ಲೆಯ ದಿಂಡವಾರು ಗ್ರಾಮದಲ್ಲಿ ಬಳ್ಳಾರಿ ಪೊಲೀಸರ ತಂಡ ಬುಧವಾರ ಸಂಜೆ ಬಂಧಿಸಿ, ಬಳ್ಳಾರಿ ಕಾರಾಗೃಹಕ್ಕೆ ಕರೆತಂದಿದ್ದಾರೆ. ಬಂಧಿತನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಶಿವಪ್ಪ ಎಂಬಾತನನ್ನೂ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂದಿಗೆ ಗ್ರಾಮದ ರೇವಣ್ಣ, ನ. 27ರಂದು ಸಂಜೆ 3.30ಕ್ಕೆ ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ದಿಂಡವಾರು ಗ್ರಾಮದ ಹೊಲದಲ್ಲಿ ಇರುವ ಸುಳಿವು ಅರಿತ ಪೊಲೀಸರು ಕೈದಿ ರೇವಣ್ಣನನ್ನು ಬಂಧಿಸಿದ್ದಾರೆ.
ಈತನಿಗೆ ಹೊಲದಲ್ಲಿ ಆಶ್ರಯ ನೀಡಿದ್ದ ಶಿವಪ್ಪನನ್ನು ಪೊಲೀಸರ ಬಂಧಿಸಿದ್ದಾರೆ.