ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಬ್ಬಿಗೆ ರು. 3 ಸಾವಿರ ಬೆಂಬೆಲೆ ಘೋಷಿಸಿ

Lingaraj Badiger
Updated On : 30 Nov 2013, 11:00 am

ಕೂಡ್ಲಿಗಿ: ರೈತರು ಬೆಳೆದ ಕಬ್ಬಿಗೆ ಮೂರು ಸಾವಿರ ಅಲ್ಲದೆ, ರೈತರ ಆತ್ಮಹತ್ಯೆ ತಡೆಗೆ ಎಲ್ಲ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ, ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ತಾಲೂಕು ರೈತ ಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಬೆಂಬಲ ಬೆಲೆ ನಿಗದಿಗೊಳಿಸುವಲ್ಲಿ ಮೀನಮೇಷ ಎಣಿಸಿದ್ದರಿಂದ ವಿಠಲ ಭೀಮಪ್ಪ ಅರಭಾವಿ ಎಂಬ ರೈತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ರೈತ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಕಬ್ಬಿನ ಬಾಕಿ ಮೊತ್ತವನ್ನು ಸಕ್ಕರೆ ಕಾರ್ಖಾನೆಗಳಿಂದ ಶೀಘ್ರ ವಿತರಿಸುವಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಮಹೇಶ್, ತಾಲೂಕು ಅಧ್ಯಕ್ಷ ಕಕ್ಕುಪ್ಪಿ ಎಂ. ಬಸವರಾಜ, ನಗರ ಘಟಕದ ಅಧ್ಯಕ್ಷ ಕಾಲ್ಚೆಟ್ಟಿ ಕೃಷ್ಣ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಭರಮಪ್ಪ, ದೇವರಮನಿ ಮಹೇಶ್, ನಾಗರಾಜ, ಆರ್.ನಾಗರೆಡ್ಡಿ, ಎಂ. ಮಂಜುನಾಥ, ಜಾತಪ್ಪ, ಕರಿಬಸಪ್ಪ, ಮಹದೇವಪ್ಪ, ಕೆ.ಎಂ. ಚಂದ್ರಯ್ಯಸ್ವಾಮಿ, ಬಾಬುನಾಯ್ಕ, ವಿ.ನಾಗರಾಜ, ಡಿ.ಮಹದೇವಪ್ಪ ಪಾಲ್ಗೊಂಡಿದ್ದರು.
ಗುಡೇಕೋಟೆ: ತಾಲೂಕಿನ ಗುಡೇಕೋಟೆಯಲ್ಲಿ ದಿನ್ನೆವಿರೂಪಾಕ್ಷಿ ನೇತೃತ್ವದಲ್ಲಿ ರೈತರು ಸರ್ಕಾರದ ರೈತವಿರೋಧಿ ನೀತಿ ಮತ್ತು ಎಂಇಎಸ್ ಶಾಸಕರ ಪುಂಡಾಟಿಕೆ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿ, ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಪ್ರತಿಕೃತಿ ದಹಿಸಿದರು.
ದಿನ್ನೆ ವಿರೂಪಾಕ್ಷಿ ಮಾತನಾಡಿದರು. ವೈ. ಸೂರ್ಯನಾರಾಯಣ, ಬಿ.ಎಸ್. ಯರಿಸ್ವಾಮಿ, ಎನ್. ಓಬಣ್ಣ, ಅನಂತ, ಕಾಂತರಾಜು, ವೆಂಕಟೇಶ್, ಗುಡದಿನ್ನೆ ನಾಗರಾಜ, ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement