ಜಾಲಿಬೆಂಚಿ ಗ್ರಾಮದಲ್ಲಿ ಹತ್ತಿ ತಳಿ ಕ್ಷೇತ್ರೋತ್ಸವ
ಬಳ್ಳಾರಿ: ಜಿಲ್ಲೆಯ ಜಾಲಿಬೆಂಚಿ ಗ್ರಾಮದಲ್ಲಿ ರೋಹಿಣಿ ಸೀಡ್ಸ್ ಕಂಪನಿಯ ಸಿದ್ಧಾಂತ ಎಂಬ ಹತ್ತಿ ತಳಿಯ ಕ್ಷೇತ್ರೋತ್ಸವ, ಕ್ಷೇತ್ರ ವೀಕ್ಷಣೆ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು. ಕಂಪನಿಯ ವ್ಯವಸ್ಥಾಪಕ ಜಿ.ಆರ್. ಮೋಹನ್ ಮಾತನಾಡಿ, ಸಿದ್ಧಾಂತ ತಳಿಯ ಲಕ್ಷಣಗಳ ಕುರಿತು ವಿವರಿಸಿದರು. ಕೀಟ, ರೋಗ ಬಾಧೆ ಬಗ್ಗೆ ಕ್ರಿಷ್ಟಲ್ ಕಂಪನಿ ಮುಖ್ಯ ವ್ಯವಸ್ಥಾಪಕ ಎಂ. ಶಿವಕುಮಾರರೆಡ್ಡಿ ತಿಳಿಸಿದರು. ಕೆ. ಸತ್ಯನಾರಾಯಣ ನಿರೂಪಿಸಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಸುರೇಶ್ ಬಡಿಗೇರ ವಂದಿಸಿದರು.