ಡಿ. 3ರಿಂದ ದಿಂಡಿ ಉತ್ಸವ
ಕೊಟ್ಟೂರು: ಭಾವಸಾರ ಕ್ಷತ್ರಿಯ ಸಮಾಜ ಬಾಂಧವರ ಆರಾಧ್ಯ ದೈವವಾದ ವಿಠ್ಠಲ-ರುಕ್ಮಿಣಿ ದೇವರ 21ನೇ ವರ್ಷದ ದಿಂಡಿ ಉತ್ಸವವನ್ನು ಕೊಟ್ಟೂರಿನಲ್ಲಿ ಡಿಸೆಂಬರ್ 3ರಿಂದ 5ರ ವರೆಗೆ ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ಹರಪನಹಳ್ಳಿಯ ಸಂತರಾಮ್ಬಾಬಾ ಸ್ಪಟಿಕೆ ಇವರಿಂದ ಪೋತಿ ಸ್ಥಾಪನೆ, ಹೊಸಪೇಟೆ ವಿನೋದ್ ಬಂಗಾಳೆಯವರಿಂದ ಕೀರ್ತನೆ, ಯಶವಂತ್ ರಾವ್ ಆಟಕ ರಿಂದ ಬಾರೋಡ ಕಾರ್ಯಕ್ರಮ, ಜಾಗರ ಭಜನೆ, ಸಂಗೀತ ಭಜನೆ ನಡೆಯಲಿವೆ. ಇದರೊಂದಿಗೆ ನಾಡಿನ ಭಾವಸಾರ ಕ್ಷತ್ರಿಯ ಸಮಾಜದ ಸಂಗೀತಗಾರರಿಂದ ವಿಶೇಷ ಸಂಗೀತ ಕಾರ್ಯಕ್ರಮ ಈ ಎರಡು ದಿನಗಳವರೆಗೆ ನಡೆಯುತ್ತವೆ ಎಂದು ಇಲ್ಲಿನ ಸಮಾಜದ ಅಧ್ಯಕ್ಷ ರಂಪುರೆ ವೆಂಕಟೇಶರಾವ್ ತಿಳಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು ಇಲ್ಲಿನ ವಿಠ್ಠಲ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಹರಪನಹಳ್ಳಿ, ಬಳ್ಳಾರಿ, ಸಂಡೂರು, ಹಗರಿಬೊಮ್ಮನಹಳ್ಳಿ, ಅರಸೀಕೆರೆ, ಹೂವಿನಹಡಗಲಿ, ಕೂಡ್ಲಿಗಿ, ಹೊಸಪೇಟೆ, ಕೊಪ್ಪಳ, ಸವಣೂರು, ಲಕ್ಷೇಶ್ವರ, ಹುಬ್ಬಳ್ಳಿಯ ಸಮಾಜದ ಪ್ರಮುಖ ಮುಖಂಡರು, ಭಜನಾ ಮಂಡಳಿಯವರು ಪಾಲ್ಗೊಳ್ಳಲಿದ್ದಾರೆ. ಕೀರ್ತನೆ, ಪ್ರವಚನ, ನಿರಂತರ ನಡೆಯುತ್ತವೆ ಎಂದು ಅವರು ತಿಳಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಪ್ರಭುದೇವ, ಸಮಾಜದ ಮುಖಂಡರಾದ ರಂಪುರ ರಾಮಚಂದ್ರರಾವ್, ಸುಲಾಖೆ ಸುರೇಶ್, ಡೊಂಗ್ರೆ ವಿಜಯಕುಮಾರ್, ಲೋಕ್ರೆ ವಾಸುದೇವ್ ರಾವ್, ನಾಜರೆ ನಾಗರಾಜ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
---
ಹುಟ್ಟುಹಬ್ಬ: ಬಡವರಿಗೆ ಬಟ್ಟೆ ವಿತರಣೆ
ಹೂವಿನಹಡಗಲಿ: ಎಪಿಎಂಸಿ ಮಾಜಿ ಅಧ್ಯಕ್ಷ ಪಿ. ವಿಜಯಕುಮಾರ್ ಅವರ ಪುತ್ರಿ ವಚನಳ ಮೊದಲ ವರ್ಷದ ಹುಟ್ಟುಹಬ್ಬದ ನಿಮಿತ್ತ ಪಟ್ಟಣದ ನೂರಾರು ಬಡವರಿಗೆ ಶುಕ್ರವಾರ ಬಟ್ಟೆ ವಿತರಿಸಿದರು.
ಜನ್ಮದಿನದ ನೆಪದಲ್ಲಿ ದುರ್ಬಲ ವರ್ಗದವರಿಗೆ ಸಹಾಯ ನೀಡುವ ಸಾಮಾಜಿಕ ಕಾರ್ಯ ಕೈಗೊಂಡಿರುವುದನ್ನು ಕಾಂಗ್ರೆಸ್ ಯುವ ಮುಖಂಡರಾದ ಮುದ್ದಿ ಗಿರಿರಾಜ, ಹನಕನಹಳ್ಳಿ ಹಾಲೇಶ್ ಶ್ಲಾಘಿಸಿದರು. ಭಾಗ್ಯ ವಿಜಯಕುಮಾರ್, ಪಿ. ಸುಮಾ, ಪುರಸಭೆ ಸದಸ್ಯರಾದ ಕೋಡಿಹಳ್ಳಿ ಕೊಟ್ರೇಶ, ಸುರೇಶ, ಬಿ. ರವಿ, ಯುವ ಮುಖಂಡರಾದ ಬಿ. ರಾಘವೇಂದ್ರ, ಎಂ. ವಿಶ್ವನಾಥ, ಬಿ. ಗುಣಶೀಲ, ಪ್ರಾಣೇಶ್, ಮಂಜುನಾಥ ಪಾಟೀಲ್, ಅಮೃತಪ್ಪ, ಅಬು, ನಾಗೇಂದ್ರ, ರಾಜವಾಳ ಸುರೇಶ, ಮಣಿಕಂಠ ಪ್ರಕಾಶ್ ಇತರರು ಹಾಜರಿದ್ದರು.