ರಫ್ತು ಅಕ್ರಮ: ಸಿಬಿಐ ಪರಿಶೀಲನೆ
ಬಳ್ಳಾರಿ: ಪರವಾನಗಿ ಇಲ್ಲದೆ ಅದಿರು ಸಾಗಿಸಿರುವ 22 ಗಣಿ ಕಂಪನಿಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಚೆನ್ನೈನ ಆರ್ಥಿಕ ಅಪರಾಧ ದಳದ ಅಧಿಕಾರಿ ಶ್ರೀಧರನ್ ನೇತೃತ್ವದ ಸಿಬಿಐ ತಂಡ ಶುಕ್ರವಾರ ಹೊಸಪೇಟೆ ತಾಲೂಕಿನ ವಿವಿಧ ಗಣಿ ಪ್ರದೇಶ ಹಾಗೂ ಸ್ಟಾಕ್‌ಯಾರ್ಡ್‌ಗಳನ್ನು ಪರಿಶೀಲಿಸಿತು. ಶ್ರೀಧರನ್ ನೇತೃತ್ವದಲ್ಲಿ ಆಗಮಿಸಿದ ಐದು ಸಿಬಿಐ ಅಧಿಕಾರಿಗಳ ತಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ದಾಲ್ಮೀಯ ಮೈನ್ಸ್, ಆರ್‌ಎಂಎ ಮೈನ್ಸ್, ಶ್ರೀ ಲಕ್ಷ್ಮಿ ವೆಂಕೇಶ್ವರ ಸ್ಟಾಕ್‌ಯಾರ್ಡ್, ವಿ.ಎಂ. ಸ್ಟಾಕ್‌ಯಾರ್ಡ್, ಶಾಂತಲಕ್ಷ್ಮಿ ಜಯರಾಂ ಸ್ಟಾಕ್‌ಯಾರ್ಡ್‌ಗೆ ಭೇಟಿ ನೀಡಿತ್ತು. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಪರಿಶೀಲನಾ ಕಾರ್ಯ ನಡೆಸಿದ್ದು, ಸಂಜೆ ಬೆಂಗಳೂರಿಗೆ ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರವಾನಗಿ ಇಲ್ಲದೆ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅದಿರನ್ನು ಅಕ್ರಮವಾಗಿ ಅದಿರು ರಫ್ತು ಮಾಡಿರುವ 22 ಕಂಪನಿಗಳ ಮೇಲೆ ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ 22 ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.