ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರು. 1.42 ಲಕ್ಷ ಮೌಲ್ಯದ ಸರ ಕಳ್ಳತನ

Lingaraj Badiger
Updated On : 30 Nov 2013, 10:52 am

ಬಳ್ಳಾರಿ: ಮನೆಯ ಬಾಗಿಲು ಬೋಲ್ಟ್ ತೆಗೆದು ನುಗ್ಗಿದ ಕಳ್ಳರು ಮನೆಯಲ್ಲಿದ್ದ ರು. 1.42 ಲಕ್ಷ ಮೌಲ್ಯದ 70 ಗ್ರಾಂ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ಗುರುವಾರ ತಡರಾತ್ರಿ ನಗರದ ಐಶ್ವರ್ಯ ಕಾಲೋನಿಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಐಶ್ವರ್ಯ ಕಾಲೋನಿಯಲ್ಲಿರುವ ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಲಕ್ಷ್ಮೀನಾರಾಯಣ ದಂಪತಿ ಹಾಗೂ ಮಗ, ಸೊಸೆ ಮನೆಯಲ್ಲಿ ಮಲಗಿದ್ದು, ಕಳ್ಳರು ಮನೆಯ ಬೋಲ್ಟ್‌ನ್ನು ತೆಗೆದು ಮನೆಯಲ್ಲಿ ಅಲ್ಮೇರಾದಲ್ಲಿದ್ದ ಒಂದು ಚಿನ್ನದ ಬ್ರಾಸ್ ಲೈಟ್, ಒಂದು ಉಂಗುರ ಸೇರಿ ರು. 1.42 ಲಕ್ಷ ಮೌಲ್ಯದ 70 ಗ್ರಾಂ ಬಂಗಾರ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಲಕ್ಷ್ಮೀನಾರಾಯಣ ಅವರು ಬೆಳಗಿನಜಾವ 3.30ಕ್ಕೆ ಮೂತ್ರ ವಿಸರ್ಜನೆಗೆ ಎದ್ದಾಗ, ಮನೆಯ ಬಾಗಿಲು ತೆಗೆದಿರುವುದನ್ನು ನೋಡಿದರು. ಬಳಿಕ ಮನೆಯ ಅಲ್ಮೆರ ಕೂಡ ತೆಗೆದಿದ್ದು ಗಮನಕ್ಕೆ ಬಂತು. ಆಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಬಳ್ಳಾರಿ ಡಿವೈಎಸ್ಪಿ ಮುರುಗಣ್ಣನವರ್ ಹಾಗೂ ಕೌಲ್‌ಬಜಾರ್ ಇನ್‌ಸ್ಪೆಕ್ಟರ್ ಗೋಳಸಂಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement