ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಂಗನವಾಡಿ ಅಕ್ಕಿ, ಬೆಲ್ಲ ಮಾರಾಟ: ಸಹಾಯಕಿ ಬಲೆಗೆ

Vishwanath S
Updated On : 2 Oct 2013, 10:27 am

ಕೊಟ್ಟೂರು: ಅಂಗನವಾಡಿ ಬಾಲ, ಬಾಲೆಯರಿಗೆ ಪೌಷ್ಟಿಕ ಆಹಾರ ನೀಡುವ ಕಾರಣಕ್ಕಾಗಿ ಸರ್ಕಾರ ಸರಬರಾಜು ಮಾಡುತ್ತಿದ್ದ ಅಕ್ಕಿ, ಗೋದಿ ಮತ್ತು ಬೆಲ್ಲವನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಅಂಗನವಾಡಿ ಸಹಾಯಕಿ ಮಾಲು ಸಮೇತ ಯುವಕರ ಕೈಗೆ ಸಿಕ್ಕುಬಿದ್ದು ಫಜೀತಿಗೀಡಾದ ಘಟನೆ ಸಮೀಪದ ಸಂಗಮೇಶ್ವರ ಗ್ರಾಮದಲ್ಲಿ ನಡೆದಿದೆ.
ಸಂಗಮೇಶ್ವರ ಗ್ರಾಮದ ಅಂಗನವಾಡಿ ಸಹಾಯಕಿ ಬಿ. ಕೊಟ್ರಮ್ಮ ಎಂಬಾಕೆಯೇ ಈ ದುಷ್ಕೃತ್ಯಕ್ಕೆ ಕೈ ಹಾಕಿದ ಮಹಿಳೆ. 2 ವರ್ಷಗಳಿಂದ ಈ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆ ಎಂ. ನಾರಮ್ಮ ಎಂಬಾಕೆಯ ಸಹಾಯದೊಂದಿಗೆ ಮಾಡುತ್ತಿದ್ದಳು. ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸರಬರಾಜಾಗುತ್ತಿದ್ದ ದಾಸ್ತಾನನ್ನು ಮಾರಾಟ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ. ಇದರಿಂದ ರೋಸಿಹೋದ ಗ್ರಾಮದ ಯುವಕರು ಮಂಗಳವಾರ ಇದಕ್ಕೆ ಇತಿಶ್ರೀ ಹಾಡಬೇಕೆಂದು ನಿಶ್ಚಯಿಸಿ ಸಹಾಯಕಿ ಬಿ. ಕೊಟ್ರಮ್ಮ ಎಂದಿನಂತೆ 25 ಕೆಜಿ ಬೆಲ್ಲ, 20 ಕೆಜಿ ಗೋದಿ, 25 ಕೆಜಿಗೂ ಅಧಿಕ ಅಕ್ಕಿಯನ್ನು ಚೀಲದೊಂದಿಗೆ ಮಾರಾಟ ಮಾಡಲು ಕೊಟ್ಟೂರಿನತ್ತ ತೆರಳುತ್ತಿದ್ದಾಗ ಮಾಲು ಸಮೇತ ಹಿಡಿದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರವಾಣಿ ಮೂಲಕ ದೂರು ನೀಡಿ ವಿವರಿಸಿದರು. ಗ್ರಾಮದ ಯುವಕ ಸಿ. ಜಗದೀಶ, ಎಂ. ಪ್ರಕಾಶ, ಶಿವಕುಮಾರ್, ಯು.ಸಿ. ಮಂಜು, ರಮೇಶ್, ಆರ್. ನಾರಪ್ಪ ಮತ್ತಿತರರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಗಮೇಶ್ವರ ಗ್ರಾಮದಲ್ಲಿ ನಿರಂತರ ಈ ಕೃತ್ಯ ನಡೆಯುತ್ತಿತ್ತು. ಇದಕ್ಕೆಲ್ಲ ಅಂಗನವಾಡಿ ಕಾರ್ಯಕರ್ತೆಯ ಪ್ರೇರಣೆ ಕಾರಣ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement