ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಾಂಧಿ ಆದರ್ಶ ರೂಢಿಸಿಕೊಳ್ಳಿ: ನಾಯಕ್

Vishwanath S
Updated On : 3 Oct 2013, 11:12 am

ಕೊಟ್ಟೂರು: ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ಅಂದು ಸ್ವಾತಂತ್ರ್ಯ ತಂದುಕೊಟ್ಟು ಗಾಂಧೀಜಿಯವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅದರಲ್ಲೂ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ತುಂಗಭದ್ರಾ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ರಮೇಶ್ ನಾಯಕ್ ಹೇಳಿದರು.
ಗಾಂಧೀಜಿಯವರು 144ನೇ ಜ್ಮನದಿನಾಚರಣೆ ಅಂಗವಾಗಿ ವಿಶೇಷ ಉನ್ಯಾಸ ನೀಡಿದ ಅವರು, ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಅಸಮಾನತೆ, ಅಸ್ಪೃಶ್ಯತೆ, ವರ್ಣಬೇಧ ನೀತಿ ವಿರುದ್ಧ ಹೋರಾಟ ಮಾಡಿದವರು. ಇಂತಹ ಮಹಾತ್ಮರ ತತ್ವ, ಸಿದ್ಧಾಂತಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮಲರ ಆದ್ಯ ಕರ್ತವ್ಯ ಎಂದರು.
ಟಿ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಜಿ. ಸೋಮಶೇಖರ, ಮುನೇಗೌಡ್ರು ಮತ್ತು ವಿದ್ಯಾರ್ಥಿ ದೊಡ್ಡಬಸಪ್ಪ ಮಾತನಾಡಿದರು. ಉಪನ್ಯಾಸಕರಾದ ಮಲ್ಲಿಕಾರ್ಜುನ ಸ್ವಾಮಿ, ಚಿತ್ತರಂಜನ್, ಸರ್ಪಭೂಷಣ, ಬಸವನಗೌಡ, ನಾಗಸುಂದ್ರಮೂರ್ತಿ, ಶ್ವೇತಾ ಮತ್ತು ನಾಗರಾಜ ಉಪಸ್ಥಿತರಿದ್ದರು. ಎ.ಎಂ.ಎಸ್. ಸರ್ಪಭೂಣಷ ಸ್ವಾಗತಿಸಿದರು. ಯು. ಮಲ್ಲಿಕಾರ್ಜುನ ಸ್ವಾಮಿ ವಂದಿಸಿದರು.

ಗಾಂಧಿ ಜಯಂತಿ: ಹಾಲು ವಿತರಣೆ
ಹಗರಿಬೊಮ್ಮನಹಳ್ಳಿ: ಬುಧವಾರ ಬೆಳಗ್ಗೆ ಗಾಂಧಿ ಜಯಂತಿ ಅಂಗವಾಗಿ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ಪಟ್ಟಣದ ಗಂ.ವೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೇಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿದರು. ಟ್ರಸ್ಟ್‌ನ ಡಂಬ್ರಳ್ಳಿ ಶಿವಪ್ಪ, ಸಿಡಿಗಿನಮೊಳ ರಾಮಣ್ಣ, ಚಿತ್ರಗಾರ ರುದ್ರಪ್ಪ, ಮಾತಾಗ್ಯಾಸ್ ಲಕ್ಷ್ಮಿನಾರಾಯಣ, ಮೇದಾರ ರಾಮಣ್ಣ, ಜಹಾಂಗೀರ್, ಟಿ.ಎಂ. ಶಿವಪ್ರಕಾಶ, ಕೆ. ಗೋವಿಂದಪ್ಪ, ಬಾವಳ್ಳಿ ರವಿ, ಮೈಲಾರಪ್ಪ, ಶಿವರುದ್ರಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ಚಿತಾಭಸ್ಮ ಸ್ಮಾರಕಕ್ಕೆ ಪೂಜೆ
ಕೂಡ್ಲಿಗಿ: ಪಟ್ಟಣದಲ್ಲಿನ ಗಾಂಧೀಜಿ ಅವರ ಪವಿತ್ರ ಚಿತಾಭಸ್ಮವಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ಬುಧವಾರ ತಾಲೂಕು ಆಡಳಿತ, ಪಪಂ, ತಾಪಂ ಸೇರಿದಂತೆ ನಾನಾ ಇಲಾಖೆ ಹಾಗೂ ಸಾರ್ವಜನಿಕರು ಗಾಂಧೀಜಿ ಜಯಂತಿ ಆಚರಿಸಿದರು. ತಹಸೀಲ್ದಾರ್ ಜವರೇಗೌಡ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಹೋದರ ಭಾವನೆಯಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.

ವಿವಿಧೆಡೆ ಗಾಂಧಿ ಜಯಂತಿ
ಬಳ್ಳಾರಿ: ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು. ಗಾಂಧೀಜಿ ಹಾಗೂ ಶಾಸ್ತ್ರಿ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಗೌರವ ಸೂಚಿಸಲಾಯಿತು. ಪಾಲಿಕೆ ಸದಸ್ಯ ಬಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡ ಗೋನಾಳು ವಿರೂಪಾಕ್ಷಗೌಡ, ಕಟ್ಟೆಮನೆ ನಾಗೇಂದ್ರಪ್ಪ, ಜಿ. ಕಮಲಾ ಮರಿಸ್ವಾಮಿ, ಕಲ್ಲುಕಂಬ ಪಂಪಾಪತಿ, ಮಂಜುಳಾ, ಕಂದಾರಿ ನಾಗರಾಜ, ಆರ್. ಪ್ರಭಾಕರ್, ಸೌಭಾಗ್ಯಲಕ್ಷ್ಮೀ, ಕೆ. ರುದ್ರಮ್ಮ, ಪಾಲಿಕೆ ಸದಸ್ಯೆ ಪರ್ವೀನ್ ಬಾನು ಹಾಗೂ ಸಿದ್ದಣ್ಣ, ಯತೀಂದ್ರ, ಬಿ. ಚಂದ್ರ, ಡಿ. ನಾರಾಯಣಪ್ಪ, ದಿವಾಕರ್ ಗೌಡ, ಕೆ.ಬಿ. ಅಂಜಿನಿ, ಡಾ. ಟಿ.ಆರ್. ಶ್ರೀನಿವಾಸ್, ಎನ್. ಗೋಪಾಲ್, ಮಲ್ಲೇಶಪ್ಪ, ಈರನಗೌಡ, ಪೆದ್ದ ಎರ್ರಿಸ್ವಾಮಿ, ಸಂತೋಷ್ ಸ್ವಾಮಿ, ಗಾದಿಲಿಂಗ, ಗೋವಿಂದ, ರಾಮಾಂಜಿನಿ, ಅಜಾದ್, ದಿವಾಕರ್‌ಗೌಡ, ಸೂರ್ಯಪ್ರಕಾಶ್ ಬಾಬು, ಕನ್ಯನಾಯಕ, ಶಾಂತಮ್ಮ, ಕಮಲಾ ಪಾಲ್ಗೊಂಡಿದ್ದರು.
ಜೆಡಿಎಸ್ ಜಿಲ್ಲಾ ಕಚೇರಿ: ಗಾಂಧೀಜಿ ಅವರ 144ನೇ ಜಯಂತಿಯನ್ನು ಆಚರಿಸಲಾಯಿತು. ಪಕ್ಷದ ಹಿರಿಯ ಮುಖಂಡ ಡಾ. ಶರ್ಮಾ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಕ್ಷದ ಪಿ. ಭಾಸ್ಕರ ರೆಡ್ಡಿ, ವೈ. ದುರುವಾಸ್, ಚಂದ್ರ ನಾಗರಾಜ್, ಕಿರಣ್, ಕುಮಾರಸ್ವಾಮಿ, ಗೋವರ್ಧನ್, ತಿಮ್ಮರಾಜ, ಆದಿಲಕ್ಷ್ಮಿ, ಅನಿತಾ, ರಾಮೇಶ್ವರಿ, ಗೌಸಿಯಾ, ಉಮಾ ಭಾಗವಹಿಸಿದ್ದರು.
ಗಾಂಧೀ ಭವನ, ಸೇವಾದಳ: ಗಾಂಧಿ ಜಯಂತಿ ನಿಮಿತ್ತ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಗಾಂಧಿ ಭವನದ ಅಧ್ಯಕ್ಷ ಡಾ. ಟೇಕೂರು ರಾಮನಾಥ್, ಪ್ರೊ. ಎಸ್. ಜಯಣ್ಣ, ವಿಮ್ಸ್ ನಿರ್ದೇಶಕ ಡಾ. ಎಂ. ಲಕ್ಷ್ಮೀನಾರಾಯಣ, ಪ್ರಾಚಾರ್ಯ ವಿದ್ಯಾಧರ ಕಿನ್ಹಾಳ, ಡಾ. ಶ್ರೀನಿವಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ. ಪಂಪಾಪತಿ, ಗಾಂಧಿ ಭವನ, ಭಾರತ ಸೇವಾದಳದ ಪದಾಧಿಕಾರಿಗಳು ಇದ್ದರು.
ಅನಿಲ್ ಲಾಡ್ ಕಚೇರಿ: ಗಾಂಧೀಜಿ ಅವರ 144ನೇ ಜಯಂತಿಯನ್ನು ಶಾಸಕ ಅನಿಲ್ ಲಾಡ್ ಅವರ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು. ಗಾಂಧೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅನಿಲ್ ಲಾಡ್ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಗಾಜುಲ ಸೀನ, ಪರ್ವಿನ್ ಬಾನು, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡ ಬುಜ್ಜೆ ಪೂಲಯ್ಯ, ಗೋಪಿ, ಪೂಲ ಪ್ರವೀಣ್, ಲಕ್ಕಿ, ಬಾಷಾ, ವಾಸು, ಲಕ್ಷಣ್, ಗುರು, ಗಿರಿ, ಶಂಕರ್, ಅನಿಲ್, ವೀರನಗೌಡ, ವಿನೋದ, ದಾದಾಪೀರ್, ನಯೀಮ್ ಇದ್ದರು.

ಎತ್ತಿನಗಾಡಿಗೆ ಲಾರಿ ಡಿಕ್ಕಿ: ಗಾಯ
ಕೂಡ್ಲಿಗಿ: ತಿಪ್ಪೆಗೆ ಗೊಬ್ಬರ ಹಾಕಿ ಬರುತ್ತಿದ್ದ ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಾಡಿಯಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ವಿರೂಪಾಪುರ ಬಳಿಯ ರಾ.ಹೆ. 13ರಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ವಿರೂಪಾಪುರ ಗ್ರಾಮದ ರೈತ ಮಲ್ಲೇಶ್ ಗಾಯಗೊಂಡ ವ್ಯಕ್ತಿ. ಈತನು ತಿಪ್ಪೆಗೆ ಗೊಬ್ಬರ ಸುರಿದು ಬರುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತಕ್ಷಣ ಕೆಳಕ್ಕೆ ಬಿದ್ದಿದ್ದರಿಂದ ತಲೆಗೆ ಹೆಚ್ಚಿನ ಪೆಟ್ಟುಬಿದ್ದು ರಕ್ತಸ್ರಾವವಾಗಿದೆ. ಗಾಯಾಳವನ್ನು ಕೂಡ್ಲಿಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಲಾರಿ ನಿಲ್ಲಿಸದೇ ಚಾಲಕ ಹೋಗಿದ್ದಾನೆ. ತಾಲೂಕಿನ ತಿಮ್ಮಲಾಪುರ ಬಳಿ ಲಾರಿಯನ್ನು ಪೊಲೀಸರು ತಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ
ಬಳ್ಳಾರಿ: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯುವಕ ಸಂಘದಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಲ್ಲುಕಂಬ ಪಂಪಾಪತಿ, ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಮಲಕಪ್ಪ, ಕರವೇ ಜಿಲ್ಲಾಧ್ಯಕ್ಷ ಅದ್ದಿಗೇರಿ ರಾಮಣ್ಣ, ವಿಜಯಕುಮಾರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಗುರುಬಸಮ್ಮ, ಬಿ.ಎಂ. ಪಾಟೀಲ್, ಕೆ.ವಿ. ಶೇಖ್, ಜಮಾಪುರದ ವೀರಭದ್ರಪ್ಪ, ಸಂಘದ ಅಧ್ಯಕ್ಷ ಜೆ.ವಿ. ಮಂಜುನಾಥ್, ಉಪಾಧ್ಯಕ್ಷ ಸಿದ್ದರಾಮೇಶ್ವರಗೌಡ, ನರೇಂದ್ರ, ವಿಜಯ್, ನಿರಂಜನ್, ಸಾಯಿ, ಪ್ರಕಾಶ್, ರಾಮು, ಮಲ್ಲಿಕಾರ್ಜುನ, ಗೋಪಾಲ್ ಮತ್ತಿತರರು ಇದ್ದರು.

ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ನಗರದ ದುರ್ಗಮ್ಮ ಗುಡಿಯಿಂದ ಕಪ್ಪಗಲ್ ರಸ್ತೆ ಅಗಲೀಕರಣ ಕಾಮಗಾರಿಗೆ 250 ಕೆ.ವಿ. ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಆ ಪ್ರದೇಶದಲ್ಲಿ ಅ. 3ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಗ್ರಾಹಕರ ಸೇವಾ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಮನವಿ ಮಾಡಿದ್ದಾರೆ.

ಮಟ್ಕಾ: ವ್ಯಕ್ತಿ ಬಂಧನ
ಕೂಡ್ಲಿಗಿ: ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಶಿವಪುರದ ಹಳ್ಳಿ ಸಿದ್ದಪ್ಪ ಉರುಫ್ ಮರುಳಸಿದ್ದಪ್ಪನನ್ನು ಮಂಗಳವಾರ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ. ಈ ಘಟನೆ ತಾಲೂಕಿ ಶಿವಪುರದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ ಪಿಎಸ್‌ಐ ಕೃಷ್ಣನಾಯ್ಕ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ: ದೂರು
ಬಳ್ಳಾರಿ: ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಹಿಳೆಯೋರ್ವಳು ಕಾಣೆಯಾಗಿದ್ದಾಳೆ. ಕಾಣೆಯಾದ ಮಹಿಳೆ ಸುಷ್ಮಾ (30). ಈಕೆಯುನ್ನು ಸ್ತ್ರೀ ಸೇವಾ ನಿಕೇತನದಿಂದ ಇಂದಿರಾ ಅವರು ಸೆ. 13ರಂದು ತಮ್ಮ ಮನೆಗೆಲಸಕ್ಕೆಂದು ಕರೆ ತಂದಿದ್ದರು. ಆದರೆ ಸೆ. 27ರಂದು ಸುಷ್ಮಾ ಒಪಿಡಿಗೆ ಹೋಗಿ ಬರುತ್ತೇನೆಂದು ಮಧ್ಯಾಹ್ನ 1.45ಕ್ಕೆ ಹೋದವಳು ಮರಳಿ ಬಂದಿರುವುದಿಲ್ಲ ಎಂದು ಅವರು ಠಾಣೆಗೆ ದೂರು ನೀಡಿದ್ದಾರೆ. 5.5 ಅಡಿ ಎತ್ತರ, ದೃಢವಾದ ಮೈಕಟ್ಟು, ಕನ್ನಡ, ಹಿಂದಿ ಮತ್ತು ತೆಲುಗು ಭಾಷೆಗಳನ್ನು ಬಲ್ಲವಳಾಗಿದ್ದಾಳೆ. ಯಾರಿಗಾದರೂ ಸುಳಿವು ಸಿಕ್ಕಲ್ಲಿ ಕೂಡಲೇ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಠಾಣಾ ಪಿಎಸ್‌ಐ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇಂದು ಸಾಮಾನ್ಯ ಸಭೆ
ಬಳ್ಳಾರಿ: ಜಿಲ್ಲಾ ಪಂಚಾಯತಿ 12ನೇ ಸಾಮಾನ್ಯ ಸಭೆಯು ಅಕ್ಟೋಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಜಿಪಂ ಕಚೇರಿಯಲ್ಲಿ ನಡೆಯಲಿದೆ. ಸಭೆಯಲ್ಲಿ ಎಲ್ಲ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹಾಜರಾಗಬೇಕೆಂದು ಜಿಪಂ ಸಿಇಒ ಮಂಜುನಾಥ ನಾಯಕ್ ತಿಳಿಸಿದ್ದಾರೆ.

ಪಂಪ್‌ಸೆಟ್ ತೆರವು  ಬೇಡ
ಬಳ್ಳಾರಿ: ಸಹಾಯಕ ಆಯುಕ್ತರು ನೀಡಿದ ಭರವಸೆ ಮೇರೆಗೆ ತುಂಗಭದ್ರಾ ಬೋರ್ಡ್, ಜೆಸ್ಕಾಂ ಹಾಗೂ ಎಚ್‌ಎಲ್‌ಸಿ ಇಲಾಖೆಗಳ ಅಧಿಕಾರಿಗಳು ರೈತರ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಜಿ. ಪುರುಷೋತ್ತಮಗೌಡ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನೀರಾವರಿ ಜಮೀನುಗಳಿಗೆ ನೀರು ದೊರೆಯದ ಕಾರಣ ಕಾಲುವೆ ಪಕ್ಕದಲ್ಲಿ ಬಸಿ ನೀರಿಗೆ ರೈತರು ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳ ತೆರವಿಗಾಗಿ ಟಿಬಿ ಬೋರ್ಡ್, ಜೆಸ್ಕಾಂ ಹಾಗೂ ಎಚ್‌ಎಲ್‌ಸಿ ಇಲಾಖೆಗಳ ಅಧಿಕಾರಿಗಳು ಮುಂದಾಗಿದ್ದರು. ಸೆ. 30ರಂದು ರೈತರೊಂದಿಗೆ ಸಹಾಯಕ ಆಯುಕ್ತರನ್ನು ಭೇಟಿ ಮಾಡಿ, ಪಂಪ್‌ಸೆಟ್ ತೆರವುಗೊಳಿಸುವ ಮೂಲಕ ರೈತರಿಗೆ ಹಾಗೂ ಬೆಳೆದು ನಿಂತ ಬೆಳೆಗಳಿಗೆ ಆಗುವ ಹಾನಿಯನ್ನು ಮನಗಾಣಿಸಿದರು. ಕೂಡಲೇ ಅಧಿಕಾರಿಗಳ ಸಭೆ ಕರೆದು ರೈತರ ಸಮ್ಮುಖದಲ್ಲೇ ನ್ಯಾಯಯುತವಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತರು ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪುರುಷೋತ್ತಮಗೌಡ ತಿಳಿಸಿದ್ದಾರೆ.

ನೇಮಕ: ಸ್ವಾಗತಾರ್ಹ
ಕೂಡ್ಲಿಗಿ: ರಾಜ್ಯ ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ವಿಕಲಚೇತನ ಅಧಿಕಾರಿ ಕೆ.ಸಿ. ರಾಜಣ್ಣರನ್ನು ಆಯುಕ್ತರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ರಾಜ್ಯ ಅಂಗವಿಕಲರ ವೇದಿಕೆ ರಾಜ್ಯಾಧ್ಯಕ್ಷ ಸಿ.ಎಂ. ಮಂಜುನಾಥಯ್ಯ ತಿಳಿಸಿದ್ದಾರೆ. ಅಂಗವಿಕಲರ ಸಮಸ್ಯೆಗಳನ್ನು ಅಂಗವಿಕಲ ಅಧಿಕಾರಿಯಾಗಿದ್ದಾಗ ಮಾತ್ರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಸಾಧ್ಯವಾಗುತ್ತದೆ. ಈವರೆಗೂ ದೈಹಿಕವಾಗಿ ಸರಿ ಇರುವ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಕ ಮಾಡುತ್ತಿದ್ದ ಸರ್ಕಾರವನ್ನು ಈ ಹಿಂದೆ ಖಂಡಿಸಿ ಅನೇಕ ಬಾರಿ ಹೋರಾಟ ಮಾಡಲಾಗಿತ್ತು. ವಿಕಲಚೇತನ ಆಯುಕ್ತರನ್ನು ಇಲಾಖೆಗೆ ನೇಮಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿತ್ತು. ಅಲ್ಲದೆ, ಇತ್ತೀಚಿಗೆ ಬೆಳಗಾವಿಯಿಂದ ಬೆಂಗಳೂರು ವರೆಗೆ ಪ್ರತಿಭಟನಾ ಪಾದಯಾತ್ರೆ ಕೈಗೊಳ್ಳಲಾಗಿತ್ತು. ನಂತರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ಧರಾಮಯ್ಯ ಹಾಗೂ  ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ ಅವರು ಅಂಗವಿಕಲ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ವಿಕಲಚೇತನ ರಾಜಣ್ಣರನ್ನು ನೇಮಕ ಮಾಡಿ ರಾಜ್ಯದ ಅಂಗವಿಕಲರಲ್ಲಿ ಚೈತನ್ಯ ಮೂಡಿಸಿದ್ದಾರೆಂದು ಸಿ.ಎಂ. ಮಂಜುನಾಥಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement