ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪರಿಸರ ರಕ್ಷಿಸದಿದ್ದರೆ ಅಪಾಯ: ಪಂಪಯ್ಯಸ್ವಾಮಿ

Vishwanath S
Updated On : 3 Oct 2013, 11:11 am

ಹೊಸಪೇಟೆ: ಪರಿಸರ ಸಂರಕ್ಷಣೆ ಹಾಗೂ ಪ್ರಾಣಿ, ಪಕ್ಷಿ ಸಂಕುಲವನ್ನು ಕಾಪಾಡದಿದ್ದರೆ ಇಡೀ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಪರಿಸರವಾದಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳಿಮಠ ಎಚ್ಚರಿಸಿದರು.
ನಗರದ ಸರ್ಕಾರಿ ಪದವಿ ಕಾಲೀಜಿನ ನಾವೀನ್ಯ ಕೂಟ ಹಮ್ಮಿಕೊಂಡಿದ್ದ ಪರಿಸರ, ಪ್ರಾಣಿ, ಪಕ್ಷಿ, ಸಂಕುಲ ಜತನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜು ಪ್ರಾಚಾರ್ಯ ಡಾ. ಕಡ್ಲಬಾಳ ಪನ್ನಂಗಧರ ಮಾತನಾಡಿ, ಪ್ರಜ್ಞಾವಂತರು, ಪರಿಸರ ಪ್ರೇಮಿಗಳು ಅಪರೂಪದ ಜೀವ ವೈವಿಧ್ಯವನ್ನು ಕಾಪಾಡಲು ಆಸಕ್ತಿ ಮತ್ತು ಬದ್ಧತೆ ತೋರಿಸಬೇಕಾಗಿರುವುದು ಇಂದಿನ ಕಾಲದ ಅಗತ್ಯತೆ. ಹೊಸಪೇಟೆ ಪ್ರದೇಶ ಹೊಂದಿರುವ ನೆಲ, ನೀರು, ಕಾಡು, ತೊರೆ, ಸ್ಮಾರಕಗಳ ಕುರಿತಂತೆ ವಿದ್ಯಾರ್ಥಿಗಳು ಅಧ್ಯಯನ ಸಂಶೋಧನೆ ನಡೆಸಲು ಬೇಕಾಗಿರುವ ವಾತಾವರಣವನ್ನು ಸರ್ಕಾರ, ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಸೇರಿದಂತೆ ಸಾರ್ವಜನಿಕರು ನಿರ್ಮಿಸಬೇಕಿದೆ ಎಂದು ಹೇಳಿದರು. ಪಕ್ಷಿ ವೀಕ್ಷಕ ಶಿವಶಂಕರ ಬಣಗಾರ, ನಾವಿನ್ಯ ಕೂಟದ ನೋಡಲ್ ಅಧಿಕಾರಿ ಡಾ.ಕೆ. ವೆಂಕಟೇಶ್ ಇದ್ದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಬಿ.ಜಿ. ಕನಕೇಶಮೂರ್ತಿ ಸ್ವಾಗತಿಸಿದರು. ಎನ್ನೆಸ್ಸೆಸ್ ಅಧಿಕಾರಿ ಟಿ.ಎಚ್. ಬಸವರಾಜ ವಂದಿಸಿದರು. ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement