ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆಂಧ್ರ ವಿಭಜನೆ ವಿರೋಧಿಸಿ ಪ್ರತಿಭಟನೆ

Mainashree
Updated On : 4 Oct 2013, 12:54 pm

ಬಳ್ಳಾರಿ: ಆಂಧ್ರಪ್ರದೇಶ ವಿಭಜಿಸಬಾರದು ಎಂದು ಆಗ್ರಹಿಸಿ ಬಳ್ಳಾರಿಯಲ್ಲಿ ಸಮೈಖ್ಯ ಆಂಧ್ರ ಪರಿರಕ್ಷಣಾ ಸಮಿತಿ ಸದಸ್ಯರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಅಖಂಡ ಆಂಧ್ರಪ್ರದೇಶವನ್ನು ವಿಭಜಿಸಬಾರದು, ಆಂಧ್ರವನ್ನು ವಿಭಜಿಸಿ ತೆಲಂಗಾಣ, ಸೀಮಾಂಧ್ರ ರಾಜ್ಯಗಳನ್ನಾಗಿ ಹಾಗೂ ಹೈದರಾಬಾದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಇಂಥ ವಿಭಜನೆ ಮಾಡಲು ಅವಕಾಶ ನೀಡದೆ, ವಿಶಾಲಾಂಧ್ರವಾಗಿ ಇರಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement