ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಹಾತ್ಮರ ತತ್ವಾದರ್ಶ ಪಾಲನೆ ಅಗತ್ಯ: ಕೃಷ್ಣಮೂರ್ತಿ

Vishwanath S
Updated On : 4 Oct 2013, 10:52 am

ಕೂಡ್ಲಿಗಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಎಲ್ಲರೂ ದೇಶಭಕ್ತಿ ಬೆಳೆಸಿಕೊಂಡಲ್ಲಿ ಮಾತ್ರ ದೇಶದ ಉನ್ನತಿ ಸಾಧ್ಯ ಎಂದು ಲೇಖಕ ಹೂಡೇಂ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಲಕ್ಷ್ಮೀವೆಂಕಟೇಶ್ವರ ಬಿಇಡಿ ಕಾಲೇಜಿನಲ್ಲಿ ಬುಧವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮರನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ನಡೆ, ನುಡಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.
ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಾರದು. ಇದನ್ನು ಪ್ರತಿಯೊಬ್ಬರೂ ಅರಿತು ನಮ್ಮ ಮುಂದಿನ ಪೀಳಿಗೆಗೆ ದೇಶದ ಮಹಾತ್ಮರನ್ನು, ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಚಂದ್ರಿಕಾ ಬಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಎಲ್. ನಾಗರಾಜನಾಯ್ಕ, ಪ್ರಾಚಾರ್ಯ ಯೋಗರಾಜ್, ಉಪನ್ಯಾಸಕ ಉಮೇಶ್ ತಳವಾರ, ಮಹ್ಮದ್ ಜಿಲಾನ್, ಜೆ. ಶಿಲ್ಪಾ, ಅರುಣಾಕುಮಾರಿ, ಐಟಿಐ ಮಂಜುನಾಥ, ಡಿ.ಜಿ. ಭದ್ರಪ್ಪ, ಮೋಹನ್‌ಗಾಂಧಿ, ರಾಘವೇಂದ್ರ,  ಸೋಮಶೇಖರ ಆರಾಧ್ಯ, ಭೀಮಸಮುದ್ರ ರಂಗನಾಥ, ಬಿ. ನಾಗರಾಜ, ವಿ.ಜಿ. ವೃಷಭೇಂದ್ರ, ಕೆ. ನಾಗರಾಜ್, ಎಲೆನಾಗರಾಜ ಮುಂತಾದವರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement