ನಾಳೆ ಸಂಗೀತ ಕಾರ್ಯಕ್ರಮ
ಹೊಸಪೇಟೆ: ಸಮುದಾಯ ಸಾಂಸ್ಕೃತಿಕ ಸಂಘಟನೆ ತಾಲೂಕು ಘಟಕದಿಂದ ದಸರಾ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ನಗರಸಭೆ ಬಳಿ) ಸಭಾಂಗಣದಲ್ಲಿ ಅ. 6ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹೂವಿನಹಡಗಲಿಯ ಸಾಹಿತಿ ಎಚ್. ಶೇಷಗಿರಿರಾವ್ ಕಾರ್ಯಕ್ರಮ ಉದ್ಘಾಟಿಸುವರು. ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಕೆ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಸಮುದಾಯದ ಬಳ್ಳಾರಿ ಜಿಲ್ಲಾ ಸಂಚಾಲಕ ಎಚ್. ಚನ್ನಬಸಪ್ಪ, ಉಪನ್ಯಾಸಕ ಎಚ್.ಎಂ. ನಿರಂಜನ, ಜೆಸ್ಕಾಂ ಅಧಿಕಾರಿ ಎಂ. ಜಂಬಯ್ಯ ನಾಯಕ, ಬಿ. ತಾಯಪ್ಪ ನಾಯಕ, ಎಂ. ಜಂಬಯ್ಯ ನಾಯಕ, ಎ. ಕರುಣಾನಿಧಿ, ಟಿ.ಎಂ. ನಾಗಭೂಷಣ, ಎಚ್.ಎಂ. ಜಂಬುನಾಥ, ಎಂ. ಉಮಾಮಹೇಶ್ವರ ಸಭೆಯಲ್ಲಿ ಭಾಗವಹಿಸುವರು. ಕವಿಗೋಷ್ಠಿಯಲ್ಲಿ ಸೋಮೇಶ ಉಪ್ಪಾರ, ಡಾ.ಎಸ್. ಬಿ. ಚಂದ್ರಶೇಖರ್, ಶ್ರೀಕಾಂತ, ಜಿ.ವಿ. ಸುಬ್ಬಾರಾವ್, ಡಿ.ಬಿ. ನಾಯ್ಕ, ಜಿ. ಪ್ರಕಾಶ ವಕೀಲರು, ಸೈಯದ್ ಹುಸೇನ್, ಬಂಗಿ ಮಂಜುನಾಥ, ಅಂಬಿಗರ ಮಂಜುನಾಥ, ಡಾ. ದಯಾನಂದ ಕಿನ್ನಾಳ, ಡಾ. ಯತ್ನಳ್ಳಿ ಮಲ್ಲಯ್ಯ, ಡಾ.ಟಿ.ಎಂ. ಉಷಾರಾಣಿ, ನೂರ್ ಜಹಾನ್, ಅಂಜಲಿ, ವಾಣಿಶ್ರೀ, ಪಂಪಾಮಹೇಶ, ಉಮಾಮಹೇಶ್ವರ, ಎಚ್.ಪಿ. ಕಲ್ಲಂಭಟ್, ಟಿ.ಎಚ್.ಎಂ. ಚಂದ್ರಶೇಖರ್, ವಸಂತ ಕಲಾಲ್, ಸಿ.ಕೆ. ಸಿರಸಂಗಿ, ಜಾತಪ್ಪ ಆರಕ್ಷಕರು, ಎನ್.ಎಂ. ವಿಜಯಕುಮಾರ ಭಾಗವಹಿಸುವರು. ಅನಂತರ ಕೆ. ಸುಜಾತಾ, ಲಲಿತಾ ಎಚ್.ಎಂ., ಜೆ. ಭಾರತಿ, ಎಚ್.ಎಂ. ತ್ರಿಲೋಕನಾಥ, ಎ. ಅಭಿಷೇಕ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ಎಚ್.ಎಂ. ಜಂಬುನಾಥ ತಿಳಿಸಿದ್ದಾರೆ.