ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ

Vishwanath S
Updated On : 5 Oct 2013, 11:36 am

ಹೊಸಪೇಟೆ: ಭಾರತ ವಿಕಾಸ ಪರಿಷತ್‌ನಿಂದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ ಉದ್ಘಾಟನಾ ಸಮಾರಂಭವು ನಗರದ ಎಂ.ಪಿ. ಪ್ರಕಾಶ್ ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಅ. 6ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಹಗರಿಬೊಮ್ಮನಹಳ್ಳಿಯ ನಂದಿಪುರ ಶ್ರೀಕ್ಷೇತ್ರದ ಮಹೇಶ್ವರ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು. ಹೂವಿನಹಡಗಲಿಯ ಸುಗಮ ಸಂಗೀತ ಕಲಾವಿದ ಪ್ರಕಾಶ್ ಜೈನ್ ಕಾರ್ಯಕ್ರಮ ಉದ್ಘಾಟಿಸುವರು. ಭಾರತ ವಿಕಾಸ ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಶ್ಯಾಮ್ ಚೌದರಿ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಇಲ್ಲಿನ ವಿಪ್ರ ವಿಚಾರ ವೇದಿಕೆಯ ಮುಖಂಡ ಕೆ. ಗುರುರಾಜ್ ರಾವ್, ವಲಯ ಕಾರ್ಯದರ್ಶಿ ವಿಠ್ಠಲ ಕೆ. ಪಾಟೇಲ್, ಧಾರವಾಡದ ವಲಯದ ಕಾರ್ಯದರ್ಶಿ ಜಗದೀಶ್ ಮಳಗಿ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾರತ ವಿಕಾಸ ಪರಿಷತ್‌ನ ವಿಜಯನಗರ ಘಟಕದ ಅಧ್ಯಕ್ಷ ಕಾಂತಿಲಾಲ್ ಜೈನ್ ವಹಿಸುವರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಮ್ಮ, ಕ್ಲಾತ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಮಧುಕರರಾವ್ ಅತಿಥಿಗಳಾಗಿ ಭಾಗವಹಿಸುವರು ಎಂದು ಭಾರತ ವಿಕಾಸ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಗೋವಿಂದ ಕುಲಕರ್ಣಿ ಹಾಗೂ ಡಾ. ಪ್ರಮೋದ ಭಾಸರಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement