ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಬೆಂಬಲ

Vishwanath S
Updated On : 6 Oct 2013, 11:29 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 5
ಪಂಚಪೀಠಾಧೀಶ್ವರರು ನಡೆಸುತ್ತಿರುವ ಪರಂಪರೆಗೆ ಯಾವುದೇ ಹಂತದಲ್ಲಿ ಕುಂದುಂಟಾಗಲು ಬಿಡುವುದಿಲ್ಲ. ಈ ಪೀಠಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸದಾ ಬೆಂಬಲವಾಗಿರುತ್ತದೆ ಎಂದು ವೀರಶೈವ ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗೀಶ ಪ್ರಸಾದ್ ಹೇಳಿದರು.
ಸಮೀಪದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಅ. 10ರಿಂದ ತುಮಕೂರು ಮಹಾನಗರದಲ್ಲಿ ಆರಂಭಗೊಳ್ಳಲಿರುವ ಉಜ್ಜಿಯಿನಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವದ ಜಾಹೀರಾತು ಬಿಡುಗಡೆಗೊಳಿಸಿ ಮಾತನಾಡಿದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ವೀರಶೈವ ಸಮಾಜ ಒಡೆಯುವ ಸಂಚನ್ನು ಪದೇ ಪದೇ ಮಾಡುತ್ತಿವೆ. ವೀರಶೈವ ಸಮಾಜ ಅತೀ ಬಲಿಷ್ಠವಾಗಿದ್ದು, ಸಮಾಜ ಒಡೆಯುವ ಪ್ರಯತ್ನ ಸಾಗಿಸಿರುವವರ ಆಟ ಖಂಡಿತ ಎಂದೂ ನಡೆಯುವುದಿಲ್ಲ. ಇಂತಹ ವಿಚಿತ್ರಕಾರಿ ಶಕ್ತಿಗಳ ಬಣ್ಣ ಬಯಲಾಗುತ್ತದೆ ಎಂದರು.
ಪಂಚಪೀಠಗಳು ಸೇರಿದಂತೆ ರಾಜ್ಯದಲ್ಲಿ ಕೆಲ ಶರಣ ಪರಂಪರೆಯ ಮಠಗಳು ಸಾರ್ವಜನಿಕ ಹಿತ ಕಾಯುವ ಕೆಲಸವನ್ನು ಸದಾ ಮಾಡಿಕೊಂಡು ಬರುತ್ತಿವೆ. ಈ ಎಲ್ಲ ಮಠಗಳ ಸ್ವಾಮೀಜಿಗಳು ರಾಜ್ಯಕ್ಕೆ ಆದರ್ಶನೀಯರಾಗಿದ್ದಾರೆ. ಈ ಕಾರಣಕ್ಕಾಗಿಯೇ ಇಂಥ ಮಠಾಧೀಶರು ಅಡ್ಡಪಲ್ಲಕ್ಕಿ ಉತ್ಸವ ಮತ್ತಿತರ ಕಾರ್ಯಕ್ರಮಗಳು ಆಗಾಗ ರಾಜ್ಯ ಅಲ್ಲದೇ ಬೇರೆ ರಾಜ್ಯಗಳಲ್ಲಿ ನಡೆಯುತ್ತಿವೆ. ಇದನ್ನು ಸಹಿಸದ ಕೆಲವರು ಸಮಾನತೆ ಹೆಸರಿನಲ್ಲಿ ವೀರಶೈವರಲ್ಲಿ ಗೊಂದಲ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದ ಅವರು, ಯಾರು ಎಷ್ಟೇ ಬೊಬ್ಬೆ ಹಾಕಿದರು ಮಠಾಧೀಶರು ಸತ್ಸಸಂಪ್ರದಾಯ ಮತ್ತು ಉತ್ಸವಗಳು ನಿರಂತರ ಜರುಗುತ್ತವೆ. ಇದಕ್ಕೆ ವೀರಶೈವ ಮಹಾಸಭಾ ಕೈಜೋಡಿಸುತ್ತದೆ ಎಂದರು.
ತುಮಕೂರು ಮಹಾನಗರದಲ್ಲಿ ಉಜ್ಜಿನಿ ಸದ್ಧರ್ಮಪೀಠದ ಜಗದ್ಗುರು ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಶರನ್ನವರಾತ್ರಿ ದಸರಾ ಮಹೋತ್ಸವ ಅ. 10ರಿಂದ ಆರಂಭಗೊಳ್ಳಲಿದ್ದು, ಇದಕ್ಕೆಂದೇ ಅನೇಕ ಬಗೆಯ ಸಿದ್ಧತೆಗಳು ನಡೆದಿವೆ ಎಂದರು.
ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಈ ಸಂದರ್ಭ ಆಶೀರ್ವಾದ ನೀಡಿ ನೆಲ, ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ ಕೀರ್ತಿ ವೀರಶೈವ ಧರ್ಮಕ್ಕೆ ಸಲ್ಲುತ್ತದೆ. ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು ಶ್ರೇಷ್ಠತೆಯನ್ನು ಜಾತಿ, ಮತ, ಪಂಥಗಳ ಗಡಿಮೀರಿ ಭಾವೈಕ್ಯತೆಯ ಬೆಸುಗೆ ಉಂಟುಮಾಡಿದ ಕೀರ್ತಿ ಈ ಸಂತತಿಗೆ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement