ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಎಸ್‌ವೈ ಶೀಘ್ರ ಬಿಜೆಪಿಗೆ ಕರೆತರುವ ಕಾರ್ಯವಾಗಲಿ

Vishwanath S
Updated On : 6 Oct 2013, 11:28 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 5
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಮರಳಿ ಬರಬೇಕು. ಯಡಿಯೂರಪ್ಪ ಬಿಜೆಪಿಯಲ್ಲಿ ಇಲ್ಲದ ಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದು ಪಾಠ ಕಲಿತಿದ್ದೇವೆ. ಆದಷ್ಟು, ಬೇಗನೆ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಬರಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಸುಶೀಲ್ ಜಿ. ನಮೋಶಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಆದರೆ, ಕಾಂಗ್ರೆಸ್ ಉತ್ತಮ ಆಡಳಿತ ನೀಡುತ್ತದೆ ಎನ್ನುವ ಭರವಸೆ ಇಲ್ಲ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ನಾಯಕರು ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಕಾಳಜಿಯೇ ಇಲ್ಲದಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಆದಷ್ಟು ಬೇಗನೆ ಬಿಜೆಪಿಗೆ ಕರೆತಂದಲ್ಲಿ ಬಿಜೆಪಿಗೆ ಒಳ್ಳೆಯದಾಗಲಿದೆ. ಈ ಕುರಿತು ಬಿಜೆಪಿಯ ಕೆಲ ನಾಯಕರು ಯಡಿಯೂರಪ್ಪನವರನ್ನು ಮತ್ತೆ ಬಿಜೆಪಿಗೆ ತರೆತರುವ ಕಾರ್ಯದಲ್ಲಿ ತೊಡಗಿದ್ದಾರೆ. ಆದಷ್ಟು ಬೇಗನೆ ಯಡಿಯೂರಪ್ಪ ಬಿಜೆಪಿಗೆ ಬರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕಡಿಮೆ ಸಂಬಳವಿದೆ. ಯುಜಿಸಿ ಸ್ಕೇಲ್ ತೆಗೆದುಕೊಳ್ಳತ್ತಿರುವ ಉಪನ್ಯಾಸಕರ ಸರಿಸಮವಾಗಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಾರೆ. ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೆಸ್ಟ್ ಉಪನ್ಯಾಸಕರಿಗೂ ಸಮಾನವಾದ ಸಂಬಳ ನೀಡಬೇಕು. ಎಂಫಿಲ್ ಮಾಡಿದ ಉಪನ್ಯಾಕಸರಿಗೆ ರು. 8 ಸಾವಿರ, ನೆಟ್ ಮಾಡಿದ ಉಪನ್ಯಾಸರಿಗೆ ರು. 10 ಸಾವಿರ ನೀಡುತ್ತಿದ್ದಾರೆ. ಆದರೆ, ಯುಜಿಸಿ ಸ್ಕೇಲ್ ತೆಗೆದುಕೊಳ್ಳುತ್ತಿರುವ ಉಪನ್ಯಾಸಕರಿಗೆ ಸುಮಾರು ರು. 50 ಸಾವಿರದಿಂದ 1 ಲಕ್ಷದವರಿಗೆ ಸಂಬಳ ನೀಡಲಾಗುತ್ತಿದೆ. ಇಂತಹ ತಾರತಮ್ಯವನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಸಿದರು.
ಶಿಕ್ಷಕರಿಗೆ ಬಿಸಿಯೂಟ, ಹಾಲು ವಿತರಣೆ ಜವಾಬ್ದಾರಿ ವಹಿಸಬಾರದು. ಶಿಕ್ಷಕರು ಆ ಕಾರ್ಯದಲ್ಲೇ ತೊಡಗಿಕೊಳ್ಳುವುದರಿಂದ ಗುಣಮಟ್ಟದ ಶಿಕ್ಷಣದ ಕಡೆಗೆ ಒಲುವು ಕಡಿಮೆಯಾಗಲಿದೆ. ಆದ್ದರಿಂದ, ಶಿಕ್ಷಕರನ್ನು ಶೈಕ್ಷಣಿಕವಾಗಿ ಚಟುವಟಿಕೆಗಳಲ್ಲಿ ಮಾತ್ರ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ಥಳೀಯ ಬಿಜೆಪಿ ಮುಖಂಡ ಅಶೋಕ್ ಜೀರೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತದೆ ಎನ್ನುವ ಭರವಸೆ ಖಂಡಿತವಾಗಿಯೂ ಇಲ್ಲ.
-  ಸುಶೀಲ್ ಜಿ. ನಮೋಶಿ,
ವಿಧಾನಪರಿಷತ್ ಮಾಜಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement