ಕರವೇ ಗೌತಮ ನಗರ ಘಟಕದ ಉದ್ಘಾಟನೆ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಸ್ಥಳೀಯ ಗೌತಮ ನಗರ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕರವೇ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ವೇದಿಕೆಯ ಗೌತಮ ನಗರ ಘಟಕವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಎಲ್ಲ ಕಾರ್ಯಕರ್ತರು ಸಂಘಟನೆಯನ್ನು ಬಲಪಡಿಸಲು ಶ್ರಮಿಸುವಂತೆ ತಿಳಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಕುರುಗೋಡು ಚನ್ನಬಸವರಾಜಗೌಡ, ನಗರ ಘಟಕದ ಅಧ್ಯಕ್ಷ ಯು.ಹನುಮೇಶ, ಬೆಣಕಲ್ ಗಂಗಾಧರ, ಗೌತಮ ನಗರ ಘಟಕದ ಪದಾಧಿಕಾರಿಗಳಾದ ಕೆ. ಮೌನೇಶ, ನಾಗಪ್ಪ, ನಾಗರಾಜ, ಶಿವು, ಪ್ರಶಾಂತ, ಲಕ್ಷ್ಮಣ, ವೀರೇಶ, ರಾಮಾಂಜಿನಿ, ನಾಗಾಂಜಿನಿ, ಭರತ್, ರಾಧಾಕೃಷ್ಣ, ಶಂಕರ, ಮಹಮ್ಮದ್ ಗೌಸ್, ನವೀನ, ಎರ್ರಿಸ್ವಾಮಿ, ಮಂಜು, ರಫೀಕ್ ಭಾಷ, ಪರಶುರಾಮ್ ಸೇರಿದಂತೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಿವಿಧೆಡೆ ಗಾಂಧಿ ಜಯಂತಿ ಆಚರಣೆ
ಬಳ್ಳಾರಿ: ನಗರದ ಅಖಿಲ ಭಾರತ ಟಿಪ್ಪು ಸುಲ್ತಾನ್ ಫೆಡರೇಷನ್ ಕಚೇರಿಯಲ್ಲಿ ಬುಧವಾರ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಪೈಲ್ವಾನ್ ರಂಜಾನ್ಸಾಬ್ ಅವರ 61ನೇ ಪುಣ್ಯತಿಥಿ ಆಚರಿಸಲಾಯಿತು. ಫೆಡರೇಷನ್ ಅಧ್ಯಕ್ಷ ಕಪ್ಪಗಲ್ ರಸೂಲ್ಸಾಬ್, ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಪೈಲ್ವಾನ್ ರಂಜಾನ್ಸಾಬ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಜನತಾದಳದ ಜಿಲ್ಲಾಧ್ಯಕ್ಷ ಪಿ. ಬಂಡೇಗೌಡ ಮಾತನಾಡಿದರು. ಕಾರ್ಯದರ್ಶಿ ಕೆ. ಮುಸತ್ಸಾಫ್, ನಗರಾಧ್ಯಕ್ಷ ಖಾಜಾ ಮೀರಾನ್, ಜಿ.ಪಿ.ರಾವ್, ತಾಳೂರು ಸೂರಿ, ಮುಕ್ತಿಯಾರ್, ಪಿಂಜಾರ್ ಸಾಬ್, ನಜೀರ್ಪಾಷಾ, ಹುಸೇನ್ಸಾಬ್, ಬಾಬು ಇತರರು ಇದ್ದರು.