ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜನಜಾಗೃತಿ ಸೈಕಲ್ ರ್ಯಾಲಿ

Lingaraj Badiger
Updated On : 7 Oct 2013, 11:22 am

ಬಳ್ಳಾರಿ: ಮಹಾತ್ಮಾ ಗಾಂಧೀಜಿ 144ನೇ ಜಯಂತಿ ನಿಮಿತ್ತ ನಗರದ ಬಚಪನ್ ಶಾಲೆ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಬುಧವಾರ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿ ಸೈಕಲ್ ರ್ಯಾಲಿ ನಡೆಸಿದರು. ಎಎಸ್‌ಪಿ ಸಿ.ಕೆ. ಬಾಬಾ ಮತ್ತು ಮೈತ್ರಿ ಬಿಸ್ವಾಸ್ ಸೈಕಲ್ ರ್ಯಾಲಿಗೆ ಚಾಲನೆ ನೀಡಿ, ಅನಂತರ ಮಾತನಾಡಿದರು. ರ್ಯಾಲಿಯು ನಗರದ ಎಸ್.ಪಿ ಕಚೇರಿಯಿಂದ ದುರ್ಗಮ್ಮ ದೇವಸ್ಥಾನ, ರಾಯಲ್ ವೃತ್ತದ ಮೂಲಕ ಡಾ. ರಾಜ್‌ಕುಮಾರ್ ಉದ್ಯಾನವನ ತಲುಪಿತು. ಉದ್ಯಾನದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಪ್ರತಿಜ್ಞೆ ಮಾಡಿದರು. ಕೆಲ ವಿದ್ಯಾರ್ಥಿಗಳು ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣಗಳನ್ನು ಧರಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ, ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement