ಪದಾಧಿಕಾರಿಗಳ ಆಯ್ಕೆ
ಕೊಟ್ಟೂರು: ಸಮಾಜದಲ್ಲಿ ಅಧ್ಯಾತ್ಮ, ಕೀರ್ತನೆ, ಭಜನೆ, ಪುರಾಣ, ಸಂಸ್ಕಾರ ಮತ್ತಿತರ ಸಂಸ್ಕೃತಿಯನ್ನು ಉಳಿಸುವ ಕಾರಣಕ್ಕಾಗಿ ಇಲ್ಲಿನ ಮಾನವ ಧರ್ಮ ಆಚಾರ್ಯ ಸಂಸ್ಕೃತಿ ಜ್ಞಾನಾಶ್ರಮ ಟ್ರಸ್ಟ್ ಸಂಘಟನೆಯೊಂದನ್ನು ಹುಟ್ಟುಹಾಕಿದೆ.
ಭಾರತೀಯ ವೈದಾಗಮ ಜ್ಯೋತಿಷ್ಯ ಪರಿಷತ್ತಿನ ಪಟ್ಟಣದ ಆಂಜನೇಯ ಬಡಾವಣೆಯ ಕಾರ್ಯಾಲಯದಲ್ಲಿ ಈ ಸಂಘಟನೆಯ ಕಾರ್ಯಕ್ಕೆಂದು ಕಚೇರಿ ತೆರೆಯಲಾಗಿದೆ.
ಈ ಸಂಘಟನೆಯ ಆಚಾರ್ಯರಾಗಿ ಸಾರಂಗಮಠದ ರವೀಂದ್ರ ಸ್ವಾಮೀಜಿ ಮಾರ್ಗದರ್ಶಕರಾಗಿದ್ದು, ಎಂ.ಎಂ. ಬಸವರಾಜಯ್ಯ ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಪಿ.ಎಂ. ವಿಶ್ವಾರಾಧ್ಯ, ಕಾರ್ಯದರ್ಶಿಯಾಗಿ ಪಿ.ಜಿ. ಅಶೋಕ್, ಉಪಕಾರ್ಯದರ್ಶಿ ಎಸ್. ಬಸವರಾಜಪ್ಪ, ಖಜಾಂಚಿಯಾಗಿ ಪಿ.ಎಂ. ವಾಮದೇವಯ್ಯನವರು ಕಾರ್ಯ ನಿರ್ವಹಿಸಲಿದ್ದಾರೆ. ಸಂಘಟನೆಯ ಸದಸ್ಯರಾಗಿ ಆರ್.ಎಂ. ಕೊಟ್ರೇಶ್, ಕೆ.ಎಚ್.ಎಂ. ಪ್ರಕಾಶ್, ಎನ್.ಎಂ. ವಾಮದೇಯ್ಯ, ಎಚ್. ಶೇಖರಪ್ಪ, ಕೆ.ಎಂ. ಪತ್ರಯ್ಯ, ಪಿ.ಎಂ. ಗುರುಬಸಯ್ಯ, ಕೆ.ಎಂ. ಪ್ರಶಾಂತಮೂರ್ತಿ, ಎ.ಎಂ. ಶಿವಶಂಕರಯ್ಯ, ಆರ್. ಮಲ್ಲಿಕಾರ್ಜುನ, ಶಿಕ್ಷಕಿ ಎಸ್.ಎಂ. ನಳಿನಾಕ್ಷಿ, ಎಂ.ಜಿ. ವನಜಾಕ್ಷಮ್ಮ, ಶಿಕ್ಷಕಿ ಆರ್.ಎಂ. ಆಶಾ ಆಯ್ಕೆ ಮಾಡಲಾಗಿದೆ ಎಂದು ಮಾನವ ಧರ್ಮ ಆಚಾರ್ಯ ಸಂಸ್ಕೃತಿ ಜ್ಞಾನಾಶ್ರಮ ಟ್ರಸ್ಟ್ ಬಳಗದವರು ತಿಳಿಸಿದ್ದಾರೆ.