ರಹಮತ್ಗೆ ಸನ್ಮಾನ
ಕುರುಗೋಡು: ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ನ ಚಾಲಕರಾಗಿ 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ರಹಮತ್ವುಲ್ಲಾ ಅವರನ್ನು ಆಸ್ಪತ್ರೆ ಸಿಬ್ಬಂದಿ, ಊರಿನ ಮುಖಂಡರು ಸನ್ಮಾನಿಸಿದರು. ವೈದ್ಯಾಧಿಕಾರಿ ಡಾ. ಪದ್ಮಾವತಿ ಮತ್ತು ಆರೋಗ್ಯ ನಿರೀಕ್ಷಕ ಟಿ. ವಿರೂಪಾಕ್ಷ, ಕೇಂದ್ರದ ಆಡಳಿತ ವರ್ಗದ ಎಲ್ಲ ಸಿಬ್ಬಂದಿ ಮತ್ತು ಊರಿನ ಮುಖಂಡರು, ಹಿತೈಷಿಗಳು ಈ ಸಂದರ್ಭದಲ್ಲಿ ಇದ್ದರು.