ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಚ್.ಎಂ. ಸಣ್ಣಜಂಬಯ್ಯ ಗವಾಯಿಗಳು ನಿಧನ

Lingaraj Badiger
Updated On : 8 Oct 2013, 11:18 am

ಹೊಸಪೇಟೆ: ಹಿರಿಯ ಸಂಗೀತ ನಿರ್ದೇಶಕ ಹಾಗೂ ರಂಗ ನಿರ್ದೇಶಕ ಎಚ್.ಎಂ. ಸಣ್ಣಜಂಬಯ್ಯ ಗವಾಯಿಗಳು (92) ಸೋಮವಾರ ಬೆಳಗಿನ ಜಾವ ತಾಲೂಕಿನ ಜಿ. ನಾಗಲಾಪುರ ಗ್ರಾಮದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳು, ಶಿಷ್ಯ ಬಳಗದವರು ಇದ್ದಾರೆ.
82ನೇ ಇಳಿ ವಯಸ್ಸಿನಲ್ಲಿ ಜಿ. ನಾಗಲಾಪುರದಲ್ಲಿ ಒಪ್ಪತ್ತೇಶ್ವರ ಸಂಗೀತ ಪಾಠ ಶಾಲೆ ತೆರೆದು ಮಕ್ಕಳಿಗೆ ಸಂಗೀತ ಕಲಿಸಿದ್ದಾರೆ. ಇವರ ಪಾಠ ಶಾಲೆಯಲ್ಲಿ ಸಂಗೀತ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಸಂಗೀತ ಶಿಕ್ಷಕರಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲ ಕಲಾವಿದರು ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಇವರು ಅನೇಕ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳನ್ನು ರಚಿಸಿ, ನಾಟಕ ಪ್ರದರ್ಶನಗೊಳಿಸಿದ್ದಾರೆ. ಸದಾ ಕ್ರೀಯಾಶೀಲರಾಗಿದ್ದ ಸಣ್ಣಜಂಬಯ್ಯ ಗವಾಯಿಗಳು ಸಂಗೀತ ಸೇವೆಯಲ್ಲಿ ತಲ್ಲೀನರಾಗಿ, ಸಂಗೀತ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
ಗವಾಯಿಗಳ ನಿಧನಕ್ಕೆ ಮರಿಯಮ್ಮನಹಳ್ಳಿಯ ಲಲಿತ ಕಲಾರಂಗ, ಮಹಿಳಾ ವೃತ್ತಿ ರಂಗಕಲಾವಿದರ ಸಂಘ, ಮಾರುತಿ ಕಲಾರಂಗ, ರೇಣುಕಾ ಜೋಗ್ತಿ ಕಲಾವಿದರ ಸಂಘ, ಸೃಷ್ಟಿ ಕಲಾಬಳಗ, ನಾಟ್ಯ ಕಲಾಬಳಗ, ಪುಟ್ಟರಾಜ ಸಂಗೀತ ಕಲಾಬಳಗ, ಮರಿಯಮ್ಮನಹಳ್ಳಿ ಹೊಬಳಿಯ ದಿನಮಾಧ್ಯಮ ಪತ್ರಕರ್ತರ ಸಂಘ ಸೇರಿದಂತೆ ಇತರೆ ಸಂಘ, ಸಂಸ್ಥೆಗಳು ಸಂತಾಪ ಸೂಚಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement