ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟೂರು ಎಪಿಎಂಸಿ: ರು. 18 ಲಕ್ಷ ಶುಲ್ಕ ಸಂಗ್ರಹ

Lingaraj Badiger
Updated On : 8 Oct 2013, 11:17 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 7
ವರಮಾನ ಗಳಿಕೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 6 ತಿಂಗಳಲ್ಲೇ ರು. 18,57,000 ಮಾರುಕಟ್ಟೆ ಶುಲ್ಕ ಪಡೆಯುವ ಮೂಲಕ ರಾಜ್ಯ ಸರ್ಕಾರ ಈ ವರ್ಷಕ್ಕೆ ನಿಗದಿ ಮಾಡಿರುವ 3.10 ಕೋಟಿ ಗುರಿ ತಲುಪುವತ್ತ ದಾಪುಗಾಲು ಹಾಕುತ್ತಿದೆ ಎಂದು ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಸೋಮವಾರ 'ಕನ್ನಡಪ್ರಭ'ಕ್ಕೆ ಈ ಕುರಿತು ಮಾಹಿತಿ ನೀಡಿದ ಅವರು, ಮಾರುಕಟ್ಟೆ ಶುಲ್ಕ ಯಾವುದೇ ಹಂತದಲ್ಲಿ ಸೋರಿಕೆಯಾಗದಂತೆ ಗಮನಹರಿಸಲಾಗಿದೆ. ಹೀಗಾಗಿ, ಈ ಗುರಿ ಸಾಧ್ಯವಾಗಿದೆ. ಪ್ರತಿ ವರ್ಷ ಮಾರುಕಟ್ಟೆ ನಿರ್ದೇಶಕರು ನೀಡುವ ಗುರಿಯನ್ನು ಕೊಟ್ಟೂರು ಎಪಿಎಂಸಿ ಸಾಧಿಸುತ್ತಿದೆ ಎಂದು ಹೇಳಿದ ಅವರು, ರೈತರ ಕೃಷಿ ಉತ್ಪನ್ನಗಳಿಗೆ ಉಳಿದೆಲ್ಲ ಮಾರುಕಟ್ಟೆಗಳಲ್ಲಿ ಸಿಗುವ ಮಾರಾಟ ದರಕ್ಕಿಂತ ಹೆಚ್ಚು ಸಿಗುತ್ತಿದೆ. ಹೀಗಾಗಿಯೇ ಇದೀಗ ರೈತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ರೈತರಿಗೆ ತೃಪ್ತಿದಾಯಕ ವಾತಾವರಣ ಕೊಟ್ಟೂರು ಮಾರುಕಟ್ಟೆಯಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮುಟ್ಟುಗೋಲು: ಕೊಟ್ಟೂರು ಎಪಿಎಂಸಿಯಲ್ಲಿ ವಹಿವಾಟು ನಡೆಸಲೆಂದೇ ಈ ಹಿಂದೆ ಮಾರುಕಟ್ಟೆಯ 2 ನಿವೇಶನಗಳನ್ನು ಪಡೆದಿದ್ದ ತೂಲಹಳ್ಳಿ ಚನ್ನಬಸಪ್ಪ ಇಲ್ಲಿವರೆಗೂ ಎಪಿಎಂಸಿ ಕಮಿಷನ್ ಏಜೆಂಟ್ ಅಥವಾ ದಲ್ಲಾಲಿ ಲೈಸೆನ್ಸ್ ಪಡೆಯದಿರುವುದರಿಂದ ಅವರಿಗೆ ಮಂಜೂರಾಗಿದ್ದ 15ಸಿ ಮತ್ತು 16ನೇ ಸಿ ನಿವೇಶನಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಏಪಿಎಂಸಿ ಮುಟ್ಟುಗೋಲು ಹಾಕಿಕೊಂಡಿದೆ ಎಂದರು.
ಕೊಟ್ಟೂರು ಮಾರುಕಟೆಯದಲ್ಲಿ ಖಾಲಿ ನಿವೇಶನ ಪಡೆದಿದ್ದ ಎ.ಜಿ. ಸಿದ್ಧೇಶ್ವರ ಟ್ರೇಡರ್ಸ್, ಮೂಗಬಸವೇಶ್ವರ ಟ್ರೇಡರ್ಸ್, ಲಕ್ಷ್ಮೀನಾರಾಯಣ ಆ್ಯಂಡ್ ಕಂ ಮತ್ತು ಜಯಲಕ್ಷ್ಮೀ ದಲಾಲಿ ಮಂಡಿ ಅಂಗಡಿಯವರು ಇಲ್ಲಿವರೆಗೂ ನಿವೇಶನದ ಸ್ಥಳದಲ್ಲಿ ಅಂಗಡಿಗಳನ್ನು ನಿರ್ಮಿಸಲು ಮುಂದಾಗಿಲ್ಲ. ಎಪಿಎಂಸಿ ಕಟ್ಟಡ ನಿರ್ಮಿಸಿಕೊಳ್ಳಲು ಸಾಕಷ್ಟು ಅವಧಿ ನೀಡಿದ್ದರೂ ಸದುಪಯೋಗಪಡಿಸಿಕೊಂಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಪಿಎಂಸಿ ಸಮಿತಿ ಉಚ್ಚ ನ್ಯಾಯಾಲಯದ ಆದೇಶದನ್ವಯ ಈ ನಾಲ್ಕು ಅಂಗಡಿಯವರು ಪಡೆದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಶೆಟ್ಟಿ ಮಲ್ಲಿಕಾರ್ಜುನ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement