ವಿಶೇಷ ಪ್ರಾಯೋಗಿಕ ಉಪನ್ಯಾಸ
ಬಳ್ಳಾರಿ: ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ವಿಶೇಷ ಪ್ರಾಯೋಗಿಕ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉರಗ ಮತ್ತು ವನ್ಯಜೀವಿ ರಕ್ಷಣಾ ವೇದಿಕೆ ಅಧ್ಯಕ್ಷ ಸಮೀರ್ ಸೇಠ್ ವಿಷಯುಕ್ತ ಮತ್ತು ವಿಷರಹಿತ ಹಾವುಗಳ ಬಗ್ಗೆ, ಅವುಗಳ ಜೀವನ ಕ್ರಮ, ಪರಿಸರ ರಕ್ಷಣೆಯಲ್ಲಿ ಹಾವುಗಳ ಪಾತ್ರ ಮತ್ತಿತರ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ವಿವಿಧ ತಳಿಗಳ ಹಾವುಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಆರ್. ವಸ್ತ್ರದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉರಗಗಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ರವಿ ಚೌಹಾಣ, ಡಾ. ಸಂಪತ್ಕುಮಾರ ಬೆಲ್ಲಮ್ಮ, ತಾಹೀರ್ ಶೇಠ್, ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.