ಲಂಚ ಪಡೆದಾತನಿಗೆ 3 ವರ್ಷ ಸಜೆ
ಬಳ್ಳಾರಿ: ಜೀವಿತ ಪ್ರಮಾಣ ಪತ್ರ ನೀಡಲು ರು. 600 ಲಂಚದ ಹಣ ಪಡೆಯುತ್ತಿದ್ದಾಗ ಬಳ್ಳಾರಿ ಲೋಕಾಯುಕ್ತ ಪೊಲೀಸರ ಟ್ರ್ಯಾಪ್‌ಗೊಳಗಾದ ಬಳ್ಳಾರಿ ತಹಸೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ. ಮಹ್ಮದ್ ಇಸ್ಮಾಯಿಲ್ ಎಂಬಾತನಿಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅ. 5ರಂದು 3 ವರ್ಷ ಕಠಿಣ ಸಜೆ ಹಾಗೂ ರು. 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಬಳ್ಳಾರಿಯ ಇನ್‌ಫ್ಯಾಂಟ್ರಿ ರಸ್ತೆಯ ನೇತಾಜಿನಗರದ ನಿವಾಸಿ ಮಹ್ಮದ್ ಆರೀಫ್ ಜೀವಿತ ಪ್ರಮಾಣ ಪತ್ರ ನೀಡುವಂತೆ 2011ರ ಫೆಬ್ರವರಿ 1ರಂದು ಪ್ರಥಮ ದರ್ಜೆ ಸಹಾಯಕ ಕೆ. ಮಹ್ಮದ್ ಇಸ್ಮಾಯಿಲ್‌ನನ್ನು ಕೋರಿದಾಗ ಅವರು ರು. 600 ಲಂಚದ ಬೇಡಿಕೆ ಇಟ್ಟಿದ್ದರು. ಕೆ. ಮಹ್ಮದ್ ಇಸ್ಮಾಯಿಲ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದರು. ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಸತೀಶ್ ಚಿಟಗುಬ್ಬಿ ತನಿಖೆ ನಡೆಸಿದ್ದರು. ಸರ್ಕಾರಿ ವಿಶೇಷ ಅಭಿಯೋಜಕ ಬಿ.ವಿ. ಬಸವರಾಜ ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಚ್.ಎಸ್. ಗಂಗಾಧರಪ್ಪ ತಿಳಿಸಿದ್ದಾರೆ.
ಮಟ್ಕಾ: ರು. 30 ಸಾವಿರ ವಶ
ಬಳ್ಳಾರಿ: ನಗರದ ರಾಣಿ ತೋಟದಲ್ಲಿರುವ ಮಲ್ಲಪ್ಪ ಎಂಬವರ ಮನೆಯ ಮುಂಭಾಗ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರನ್ನು ಬ್ರೂಸ್‌ಪೇಟೆ ಠಾಣಾ ಪೊಲೀಸರು ಬಂಧಿಸಿ, ಅವರಿಂದ ನಗದು, ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬ್ರೂಸ್‌ಪೇಟೆ ಠಾಣೆ ಪಿಐ ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ರು. 30,050,10 ಮಟ್ಕಾ ಪಟ್ಟಿ, 9 ಮೊಬೈಲ್ ವಶಪಡಿಸಿಕೊಂಡಿದ್ದಾರೆ.