ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಟಿ ಹತ್ತಿ ಬೆಳೆದ ರೈತರಿಗೆ ಪರಿಹಾರ ನೀಡಿ

Vishwanath S
Updated On : 10 Oct 2013, 10:46 am

ಕೂಡ್ಲಿಗಿ: ಬಿಟಿ ಹತ್ತಿ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ಅಧ್ಯಕ್ಷ ಕಕ್ಕುಪ್ಪಿ ಎಂ. ಬಸವರಾಜ ಮಾತನಾಡಿ, ಸರ್ಕಾರದಿಂದ ವಿತರಿಸಿದ ಬಿಟಿ ಹತ್ತಿ ಫಸಲು ರೈತರಿಗೆ ಶಾಪವಾಗಿದೆ. ಉತ್ತಮ ಬೆಳೆಯ ಕನಸು ಕಂಡಿದ್ದ ರೈತರಿಗೆ ಕಳಪೆ ಬೀಜದಿಂದ ನಿರಾಸೆಯಾಗಿದೆ. ಸರ್ಕಾರವೇ ರೈತರನ್ನು ವಂಚಿಸಿದಂತಾಗಿದೆ. ಕೂಡಲೆ ತಾಲೂಕಿನಾದ್ಯಂತ ಸಮೀಕ್ಷೆ ನಡೆಸಿ, ಬಿಟಿ ಹತ್ತಿ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಎನ್. ಭರಮಣ್ಣ ಮಾತನಾಡಿ, ಬಿಟಿ ಹತ್ತಿ ಬಿತ್ತನೆಯಿಂದ ರೈತರ ಬಾಳಲ್ಲಿ ಕತ್ತಲು ಮೂಡಿದೆ. ಮಣ್ಣಿನ ಫಲವತ್ತತೆ ಹಾಳಾಗುವುದಲ್ಲದೆ ಕೀಟ ಬಾಧೆಗೆ ರಾಸಾಯನಿಕ ಸಿಂಪರಣೆ ಮಾಡಬೇಕಾಗಿರುವುದರಿಂದ ನಷ್ಟವೇ ಜಾಸ್ತಿಯಾಗಿದೆ ಎಂದು ಆರೋಪಿಸಿದರು.
ಶಿರಸ್ತೇದಾರ್ ವಿಜಯಕುಮಾರ್ ಮತ್ತು ತಾಲೂಕು ಕೃಷಿ ಅಧಿಕಾರಿ ಮಂಜುನಾಥ ಮನವಿ ಸ್ವೀಕರಿಸಿದರು. ಮುಖಂಡರಾದ ಸಿ.ಜೆ. ಹಳ್ಳಿ ಬಾಬುನಾಯ್ಕ, ಎಂ. ಕೊಟ್ರೇಶಪ್ಪ, ರಾಜುಗೌಡ, ಎಸ್. ಬಾಷಾ, ನಾಗರೆಡ್ಡಿ, ಜಿ. ಜಾತಪ್ಪ, ಎಂ. ಮಹಾದೇವಪ್ಪ, ವೀರೇಶ, ರೆಡ್ಡಿನಾಯ್ಕ, ರೇವಣ್ಣ, ರತ್ನನಾಯ್ಕ, ಸೂರ್ಯನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement