ಹಿರಿಯ ನಾಗರಿಕರ ದಿನಾಚರಣೆ
ಬಳ್ಳಾರಿ: ಜಿಲ್ಲಾ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಬಸವ ಭವನದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ. ಸಂಪತ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ನಂತರ 75 ವರ್ಷಕ್ಕೂ ಮೇಲ್ಪಟ್ಟ 60 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಬಿಜಾಪುರದ ರೇಣುಕಾ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾಧ್ಯಕ್ಷ ಎಂ. ಸಣ್ಣಬಸಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ. ರೇವಣಸಿದ್ದಯ್ಯ, ಪಾಲಿಕೆ ಸದಸ್ಯ ಬೆಣಕಲ್ಲು ಬಸವರಾಜಗೌಡ, ಪಿ. ಸುಧಾಕರ್, ಕೆ. ನಾಗರಾಜ್, ಅಶೋಕ್‌ಕುಮಾರ್, ಇ. ಅಕ್ಬರ್, ನಾಗಮ್ಮ, ಚಾಂದ್‌ಬಾಷಾ, ಕೂಡ್ಲಿಗಿ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ, ಎ.ಎಂ. ವೀರಯ್ಯ, ಸಿರುಗುಪ್ಪ ತಾಲೂಕು ಅಧ್ಯಕ್ಷ ಜಿ.ಎಂ. ಅವುಟೆ, ಬಿ.ಎಂ. ಕುಮಾರಸ್ವಾಮಿ ಮತ್ತು ಪದಾಧಿಕಾರಿಗಳು ಇದ್ದರು.
11ಬಿಆರ್‌ವೈ3
ಬಳ್ಳಾರಿಯ ಬಸವ ಭವನದಲ್ಲಿ ಬಳ್ಳಾರಿ ಜಿಲ್ಲಾ ನಿವೃತ್ತ ನೌಕರರ ಸಂಘ ಏರ್ಪಡಿಸಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಸಂಘದ ರಾಜ್ಯಾಧ್ಯಕ್ಷ ಡಿ. ಸಂಪತ್ ಉದ್ಘಾಟಿಸಿದರು.