ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

20ರಂದು ನೌಕರರ ಸಭೆ

Lingaraj Badiger
Updated On : 16 Oct 2013, 11:44 am

ಹೂವಿನಹಡಗಲಿ: ರಾಜ್ಯ ವೀರಶೈವ ಪಂಚಮಸಾಲಿ ನೌಕರರ ಸಂಘದ ಸಭೆ ಅ. 20ರಂದು ಕೊಟ್ಟೂರಿನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಉತ್ತಂಗಿ ತಿಳಿಸಿದ್ದಾರೆ. ಪಂಚಮಸಾಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಪಂಚಮಸಾಲಿ ಸಂಘದ ರಾಜ್ಯಧ್ಯಕ್ಷ ಬಸವರಾಜ ದಿಂಡೂರು, ಉಪಾಧ್ಯಕ್ಷ ಬಿ. ನಾಗನಗೌಡ, ಜಿಲ್ಲಾಧ್ಯಕ್ಷ ಬಿ. ಕುಮಾರಸ್ವಾಮಿ, ನೌಕರರ ಸಂಘಗಳ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಂಚಮಸಾಲಿ ಸಮಾಜದ ನೌಕರರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪಂಚಮಸಾಲಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿ.ಜೆ. ಚಂದ್ರಪ್ಪ, ಕಾರ್ಯದರ್ಶಿ ಬಸೆಟ್ಟಿ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಆರುಣಿ ಸುರೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಚಾರ ಬದಲಾವಣೆ
ಬಳ್ಳಾರಿ: ಬಕ್ರೀದ್ ಹಬ್ಬದ ಪ್ರಯುಕ್ತ ಬುಧವಾರ ನಗರದ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ತೆರಳುವ ಮುಸ್ಲಿಂ ಬಾಂಧವರನ್ನು ಹೊರತುಪಡಿಸಿ, ಇಲ್ಲಿನ ಮೋತಿ ವೃತ್ತದಿಂದ ಬೆಂಗಳೂರು ರಸ್ತೆಗೆ ಹೋಗುವ ಹಾಗೂ ಬೆಂಗಳೂರು ರಸ್ತೆಯಿಂದ ಮೋತಿ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ಬೆಳಗ್ಗೆ 6ರಿಂದ ಮಧ್ಯಾಹ್ನದವರೆಗೆ ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಆರ್. ಗಾಯಿತ್ರಿ ತಿಳಿಸಿದ್ದಾರೆ. ವಾಹನ ಚಾಲಕರು ನಗರದ ಅನಂತಪುರ ಬೈಪಾಸ್ ರಸ್ತೆ ಮೂಲಕ ಸಂಚರಿಸಲು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಜಯಂತಿ ಆಚರಣೆಗೆ ನಿರ್ಧಾರ
ಕೂಡ್ಲಿಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ತಹಸೀಲ್ದಾರ್ ಜವರೇಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅ. 18ರಂದು ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ವಾಲ್ಮೀಕಿ ದೇವಸ್ಥಾನದ ಬಳಿಯ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವುದು. ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಸಭೆ ನಡೆಸುವುದು. ವಾಲ್ಮೀಕಿ ಸಮುದಾಯದ ಸಾಧಕರು ಹಾಗೂ ಕಳೆದ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಸೇರಿ ಅನೇಕ ವಿಚಾರಗಳನ್ನು ಚರ್ಚಿಸಲಾಯಿತು. ಕೆ. ಮಲ್ಲಣ್ಣ, ಎನ್. ಮುದ್ದಪ್ಪ, ಪಪಂ ಮಾಜಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ವಾಲ್ಮೀಕಿ ಸಮಾಜದ ಬಿ. ಭೀಮೇಶ್, ಕಾಟೇರ್ ಹಾಲೇಶ್, ಜಯರಾಂ ನಾಯಕ, ತಳವಾರ ಶರಣಪ್ಪ, ಸಿ.ಬಿ. ಸಿದ್ದೇಶ್, ಪಿ. ಪದ್ಮಾ, ಜಯಮ್ಮ, ಬಿ. ಶಿವಕುಮಾರಿ, ಬೊಮ್ಮಗಟ್ಟೆ ಪಂಪಾಪತಿ, ಎಂ. ಆನಂದ್, ಪಿ.ವಿ. ಕೊತ್ಲಪ್ಪ, ವೀರಯ್ಯ, ಮಾರೇಶ್, ಕಾಟೇರ್ ಶೇಷಣ್ಣ, ಹಿರೇಕುಂಬಳಗುಂಟೆ ಉಮೇಶ್, ಕಲ್ಲಹಳ್ಳಿ ಬಸಪ್ಪ, ಬ್ಯಾಳಿ ಶಿವಪ್ರಸಾದಗೌಡ, ಬಿ. ಮರಿಯಪ್ಪ, ಮಂಜುನಾಥ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement