ಜನಜಾಗೃತಿ ಕಾರ್ಯಕ್ರಮ
ಹೂವಿನಹಡಗಲಿ: ಯುವ ಜನಾಂಗ ದುಶ್ಚಟಗಳನ್ನು ಬಿಟ್ಟು ಆರೋಗ್ಯವಂತರಾಗಬೇಕು ಎಂದು ಹೊಳಗುಂದಿ ಮಹಿಳಾ ಸಂಘದ ಸದಸ್ಯೆ ಎ.ಜಿ. ಸಾವಿತ್ರಮ್ಮ ಕರೆ ನೀಡಿದರು. ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಂಬಳಿ ವಲಯ ಹಮ್ಮಿಕೊಂಡಿದ್ದ ಗುಟ್ಕಾ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಯಾನಂದ ಮಾತನಾಡಿ, ಸಿಗರೇಟ್ ಮತ್ತು ಗುಟ್ಕಾ ಸೇವನೆಯಿಂದಾಗುವ ದುಷ್ಟರಿಣಾಮಗಳ ಬಗ್ಗೆ ವಿವರಿಸಿದರು. ಆರೋಗ್ಯ ಇಲಾಖೆ ಅಧಿಕಾರಿ ಯಂಕಪ್ಪ, ಎ.ಎಂ.ಪಿ. ಸಂದೀಪ ಮಾತನಾಡಿದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಂಬಳಿ ವಲಯ ಮೇಲ್ವಿಚಾರಕಿ ಕವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಾ, ಶ್ರುತಿ ಪ್ರಾರ್ಥಿಸಿದರು. ಭಾರತಿ ಸ್ವಾಗತಿಸಿದರು. ರೇಖಾ ವಂದಿಸಿದರು.