ಬಾಗಿಲು ಮುರಿದು ಮನೆ ಕಳ್ಳತನ
ಬಳ್ಳಾರಿ: ಮನೆ ಬಾಗಿಲ ಚಿಲಕ ಮುರಿದ ಕಳ್ಳರು ಮನೆಯಲ್ಲಿದ್ದ ರು. 3.79 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ವಸ್ತುಗಳನ್ನು ಕಳ್ಳತನ ಮಾಡಿಕೊಂಡಿರುವ ಘಟನೆ ಭಾನುವಾರ ಮಧ್ಯರಾತ್ರಿ ನಗರದ ರಾಮಯ್ಯ ಕಾಲೋನಿಯಲ್ಲಿ ನಡೆದಿದೆ. ಬಳ್ಳಾರಿಯ ರಾಮಯ್ಯ ಕಾಲೋನಿಯ ಕುಮಾರ್ ಶಾಮಸುಂದರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜೆಎಸ್‌ಡಬ್ಲ್ಯುನಲ್ಲಿ ಎಂಜಿನಿಯರಾಗಿ ಕೆಲಸ ಮಾಡುತ್ತಿದ್ದಾರೆ. ಬಂಗಾರದ ಆಭರಣಗಳು, ಗಣೇಶ ವಿಗ್ರಹ ಸೇರಿ 185 ಗ್ರಾಂ ಬಂಗಾರದ ಒಟ್ಟು ರು. 3.48 ಲಕ್ಷ ಮೌಲ್ಯದ ಬಂಗಾರದ ವಸ್ತುಗಳು, ರು. 30 ಸಾವಿರ ಮೌಲ್ಯದ ಲೆನೋವಾ ಲ್ಯಾಪ್‌ಟಾಪ್, ಎರಡು ಟೈಮ್ಯಾಕ್ಸ್ ಕಂಪನಿಯ ಕೈಗಡಿಯಾರಗಳು ಸೇರಿದಂತೆ ರು. 3.79 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.