ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಡಗರದ ವಿಜಯದಶಮಿ

Lingaraj Badiger
Updated On : 16 Oct 2013, 11:43 am

ಕೊಟ್ಟೂರು: ವಿಜಯದಶಮಿಯನ್ನು ಪಟ್ಟಣದ ಜನತೆ ಸಡಗರ ಸಂಭ್ರಮಗಳೊಂದಿಗೆ ಸೋಮವಾರ ಆಚರಿಸಿದರು. ದಸರಾ ನಿಮಿತ್ತ ಪ್ರಮುಖ ಆಕರ್ಷಣೆಯಾದ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ಸಂಜೆ 7ರ ವರೆಗೆ ವಿಜೃಂಭಣೆಯಿಂದ ನಡೆಯಿತು.
ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಅಕ್ಬರ್ ಬಾದಶಹ ನೀಡಿದ ಖಡ್ಗವನ್ನು ಇರಿಸಿದ ನಂತರ ಪಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯಗಳೊಂದಿಗೆ ಪಟ್ಟಣದ ತೇರು ಬಜಾರಿನ ಮೂಲಕ ಸಾಗಿ ನಂತರ ಬನ್ನಿ ಮಂಟಪದತ್ತ ಸಾಗಿತು. ಉತ್ಸವದ ನೇತೃತ್ವವನ್ನು ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮಿ, ಹಿರೇಮಠದ ಪ್ರಮುಖ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ವಹಿಸಿದ್ದರು. ಬನ್ನಿ ಮಂಟಪದಲ್ಲಿ ಪಲ್ಲಕ್ಕಿಯನ್ನು ಇರಿಸಿ ಸಂಪ್ರದಾಯದಂತೆ ಪಟ್ಟಣ ಮತ್ತು ಸುತ್ತಮುತ್ತಲಿನ ಜನತೆ ಪರವಾಗಿ ಬ್ರಾಹ್ಮಣ ಗೋಪಾಲ್ ರಾವ್ ಬನ್ನಿ ಮರಕ್ಕೆ ಒಕ್ಕಣಿಕೆ ಬರೆದ ಪತ್ರವನ್ನು ಕಟ್ಟುತ್ತಿದ್ದಂತೆಯೇ ಬನ್ನಿ ವಿತರಣೆಗೆ ಚಾಲನೆ ದೊರೆಯಿತು. ಕಿಕ್ಕಿರಿದು ಸೇರಿದ್ದ ಜನತೆ ಈ ಹಂತದಲ್ಲಿ ಬನ್ನಿಯನ್ನು ಪಲ್ಲಕ್ಕಿಯಿಂದ ಪಡೆಯಲು ಮುಂದಾದರು. ಪೊಲೀಸರು ಬಹುಹೊತ್ತಿನವರೆಗೆ ನಿಯಂತ್ರಿಸಿದರು. ಬೆಳ್ಳಿ ಪಲ್ಲಕ್ಕಿ ಉತ್ಸವ ಮರಳಿ ಬನ್ನಿ ಮಂಟಪದಲ್ಲಿ ಸಂಜೆ 7ರ ಸುಮಾರಿಗೆ ಮೂಲ ಹಿರೇಮಠಕ್ಕೆ ಬಂದು ಸೇರಿತು. ಜನತೆ ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement