ಸಾಹಿತ್ಯ ಮನುಷ್ಯನನ್ನಾಗಿಸುವ ಸಾಧನ
ಬಳ್ಳಾರಿ: ಸಾಹಿತ್ಯ ಮೃಗವನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದು ಕತೆಗಾರ ಕೇಶವ ಮಳಗಿ ತಿಳಿಸಿದರು.
ಪ್ರಜ್ಞೆ ಪ್ರತಿಷ್ಠಾನ ಆಯೋಜಿಸಿದ್ದ ಮಹನೀಯರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಒಡಕು ಕೆಡುಕಗಳನ್ನು ತುಂಬುವುದು ಕೂಡ ಸಾಹಿತ್ಯದ ಉದ್ದೇಶವಾಗಿದೆ. ನಿಜವಾದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವವರು ಮಧ್ಯಮ ವರ್ಗವರಾಗಿದ್ದಾರೆ. ರಾಜಕೀಯ ಮತ್ತು ಸಾಹಿತ್ಯ ಸಿದ್ಧಾಂತಗಳಿಂದ ಯುವ ಸಮೂಹಕ್ಕೆ ಮೋಸವಾಗಿದೆ. ನಾನು ಮಾತ್ರ ಶ್ರೇಷ್ಠ ಉಳಿದವರು ಕನಿಷ್ಠರು ಎನ್ನುವ ಶ್ರೇಷ್ಠತೆಯ ವ್ಯಸನ ಇಂದಿನ ಸಾಹಿತಿಗಳಿಗಿದೆ. ನಿಜವಾದ ಸಾಹಿತ್ಯ ಸಂಸ್ಕೃತಿ ಕುರಿತು ಚಿಂತನೆ ಮಾಡುವವರು ಸೃಷ್ಟಿಶೀಲ ಸಾಹಿತ್ಯ ಕ್ರಿಯೆಯ ಮೂಲಕ ಯುವ ಸಮೂಹವನ್ನು ಸೆಳೆಯಬೇಕಿದೆ ಎಂದು ತಿಳಿಸಿದರು.
ಸಿರಿಗೇರಿ ಪನ್ನರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನವಿಲು ಸಾಹಿತ್ಯ ಮಾಸಪತ್ರಿಕೆ ಬಿಡುಗಡೆ ಮಾಡಲಾಯಿತು. ಮಾಸಪತ್ರಿಕೆ ಸಂಪಾದಕ ವಿ.ಆರ್. ಕಾರ್ಪೆಂಟರ್ ಡಾ.ಎ. ತಿಮ್ಮನಗೌಡ, ಪ್ರೊ. ಜಯಪ್ರಕಾಶಗೌಡ, ಪ್ರಜ್ಞೆ ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಮ ಕಲ್ಮಠ, ವೆಂಕಟೇಶ ಉಪ್ಪಾರ, ಗಿರಿಜಾಪತಿ, ಕೆ. ಗೋವರ್ಧನರೆಡ್ಡಿ, ಶಿವೇಶ್ವರಗೌಡ, ಎನ್.ಡಿ. ವೆಂಕಮ್ಮ, ಡಾ. ಆರ್.ವಿ. ವಸ್ತ್ರದ್, ಕಳಕಪ್ಪಗೌಡ, ವಿರೂಪಾಕ್ಷಯ್ಯ ಪಾಲ್ಗೊಂಡಿದ್ದರು. ಭಾಗ್ಯಶ್ರೀ ಪ್ರಾರ್ಥಿಸಿದರು. ಹನುಮಯ್ಯ ಮತ್ತು ತಂಡ ಭಾವಗೀತೆ ಹಾಡಿದರು. ಟಿ.ಎಂ. ಪಂಪಾಪತಿ ಸ್ವಾಗತಿಸಿದರು. ಎ. ಮಲ್ಲಿಕಾರ್ಜುನ ನಿರೂಪಿಸಿದರು. ರಫೀಕ್ ವಂದಿಸಿದರು.