ಕೋಳಿ ಕಾಳಗ: 14 ಜನರ ಬಂಧನ
ಬಳ್ಳಾರಿ: ತಾಲೂಕಿನ ಬಳ್ಳಾಪುರ ಕ್ಯಾಂಪ್ ಗ್ರಾಮದ ಕೋಳಿ ಕಾಳಗ ಜೂಜಾಟದ ಅಡ್ಡೆ ಮೇಲೆ ಕುರುಗೋಡು ಪೊಲೀಸರು ದಾಳಿ ಮಾಡಿ, 14 ಜನರನ್ನು ಬಂಧಿಸಿ, ಅವರಿಂದ ರು. 36,400 ನಗದು, 2 ಕೋಳಿ, 17 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಳ್ಳಾಪುರ ಕ್ಯಾಂಪಿನಲ್ಲಿ ಕೋಳಿ ಪಂದ್ಯದ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕುರುಗೋಡು ಪಿಎಸ್ಐ ಸೋಮಶೇಖರ ಹಾಗೂ ಸಿಬ್ಬಂದಿ ದಾಳಿ ಮಾಡಿ ರಾಜೇಶ್ಕುಮಾರ್ ಸೇರಿದಂತೆ 14 ಜನರನ್ನು ಬಂಧಿಸಿ, ಅವರಿಂದ 2 ಕೋಳಿ, 17 ಮೋಟಾರ್ ಸೈಕಲ್, ರು. 36,400 ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.