ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಘಟಿತರಾಗಿ ನಾಡಿನ ಪರಂಪರೆ ಉಳಿಸಿ

Lingaraj Badiger
Updated On : 17 Oct 2013, 11:58 am

ಬಳ್ಳಾರಿ: ಎಲ್ಲಾ ಸಮಾಜದವರು ಸಹ ಸಂಘಟಿತರಾಗಿ ನಾಡಿನ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ಕುರುಗೋಡು ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಕಕ್ಕಯ್ಯನಮಟ್ಟಿಯ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀದೇವಿ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮದು ಧಾರ್ಮಿಕ ಪರಂಪರೆ ಹಿನ್ನೆಲೆಯುಳ್ಳ ನಾಡು. ಸಾಧು, ಸಂತರು, ಶರಣರು ತಪಸ್ಸುಗೈದ ನಾಡು. ಆದ್ದರಿಂದ ಯಾವ ಪ್ರಕೃತಿ ವಿಕೋಪಗಳು ಬಂದರೂ ಅವುಗಳನ್ನು ನಿಗ್ರಹಿಸಿಕೊಂಡು ಹೋಗುವ ಶಕ್ತಿ ಈ ನಾಡಿಗಿದೆ ಎಂದರು.
ಗರಗ ನಾಗಲಾಪುರದ ಮರಿಮಹಾಂತ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಾಣ ಪ್ರವಚನ ಪಠಣವನ್ನು ಷಡಕ್ಷರಯ್ಯಸ್ವಾಮಿ ಮತ್ತು ಸಂಗಡಿಗರು ನಡೆಸಿಕೊಟ್ಟರು. ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಕಾರ್ಯದರ್ಶಿ ಬಸವರಾಜಸ್ವಾಮಿ, ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ. ಉಮಾಪತಿಗೌಡ, ಚಂದಜಗದೀಶಪ್ಪ, ಎಚ್.ಎಂ. ವಿಶ್ವನಾಥಸ್ವಾಮಿ, ಕುಂಬಾರ ದೊಡ್ಡಪ್ಪ, ಮೃತ್ಯುಂಜಯಸ್ವಾಮಿ, ಕಲ್ಲುಕಂಭ ಎರ್ರಿಪ್ಪ, ಮಂಜುನಾಥಸ್ವಾಮಿ, ಮುದಿಮಲ್ಲಪ್ಪ, ಐ. ವಿರೂಪಾಕ್ಷಗೌಡ, ಕುರುಗೋಡು, ಸುತ್ತಮುತ್ತಲ ಗ್ರಾಮದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement