ಹೊಲಿಗೆ ಉಚಿತ ತರಬೇತಿ ಶಿಬಿರ
ಕೊಪ್ಪಳ: ಕೊಪ್ಪಳ ನೆಹರು ಯುವ ಕೇಂದ್ರ, ಬೆಂಗಳೂರಿನ ದಿ ಆರ್ಟ್ ಆಫ್ ಲಿವಿಂಗ್, ಕದ್ರಳ್ಳಿಯ ವಂದೇಮಾತರಂ ಯುವಕ ಸಂಘ ಮತ್ತು ಕದ್ರಳ್ಳಿಯನೇತಾಜಿ ಸುಭಾಷ ಚಂದ್ರಬೋಸ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಯಲಬುರ್ಗಾ ತಾಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಮಹಿಳೆಯರಿಗೆ ಹೊಲಿಗೆಯ ಉಚಿತ ತರಬೇತಿ ಶಿಬಿರ ಈಚೆಗೆ ಆಯೋಜಿಸಲಾಗಿತ್ತು.
ಗ್ರಾಪಂ ಸದಸ್ಯ ಪಾರಮ್ಮ ಹಳ್ಳಿಗುಡಿ ಕಾರ್ಯಕ್ರಮದ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಪರಸಪ್ಪ ಸಂಗನಾಳ, ಗ್ರಾಮದ ಹಿರಿಯರಾದ ಹನುಮಂತಪ್ಪ ಬಂಡಿಹಾಳ, ಹನುಮಂತಪ್ಪ ದೊಡ್ಡಮನಿ, ದುರ್ಗಪ್ಪ ಮೂಲಿಮನಿ ಸೇರಿದಂತೆ ಇತರ ಮುಖಂಡರು ಪಾಲ್ಗೊಂಡಿದ್ದರು.
ವಂದೇಮಾತರಂ ಸೇವಾ ಸಂಘದ ಸಂಸ್ಥಾಪಕ ರಾಕೇಶ ಕಾಂಬ್ಳೇಕರ್ ಪ್ರಾಸ್ತಾವಿಕ ಮಾತನಾಡಿದರು. ನೆಹರು ಯುವ ಕೆಂದ್ರದ ಸೇವಕ ಮಂಜುನಾಥ ಬೆಟಗೇರಿ, ಕದ್ರಳ್ಳಿ ಯುವಕ ಸಂಘದ ಕಾರ್ಯದರ್ಶಿ ವಿಜಯಕುಮಾರ ರಜಪೂತ ಇದ್ದರು. ರಾಜಪ್ಪ ಚನ್ನಿನಾಯಕ್ ವಂದಿಸಿದರು.