ಹೊಸಪೇಟೆ: 20ರಂದು ಮಹಿಳಾ ಶಕ್ತಿ ಸಂಗಮ ಕಾರ್ಯಕ್ರಮ
ಹೊಸಪೇಟೆ: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಮತ್ತು ಮಹಿಳಾ ಜಾಗೃತಿಗಾಗಿ ಮಹಿಳಾ ಶಕ್ತಿ ಸಂಗಮ ಕಾರ್ಯಕ್ರಮ ನಗರದಲ್ಲಿ ಅ. 20ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ವಿಜಯನಗರ ರಾಜವಂಶಜರಾದ ರಾಜಮಾತಾ ಚಂದ್ರಕಾಂತಾ ದೇವಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅ. 20ರಂದು ರಾಷ್ಟ್ರ ಸೇವಿಕಾ ಸಮಿತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 5 ಗಂಟೆಗೆ ನಗರದ ಟೌನ್ರೀಡಿಂಗ್ ರೂಂ ಆವರಣದಲ್ಲಿ ಬಹಿರಂಗಸಭೆ ನಡೆಯಲಿದೆ. ಸಂಜೆ ನಡೆಯಲಿರುವ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ನೀಡುವರು. ರಾಜಮಾತಾ ಚಂದ್ರಕಾಂತಾ ದೇವಿ ಅಧ್ಯಕ್ಷತೆ ವಹಿಸುವರು. ಬಾಬುಲಾಲ್ ಜೈನ್, ಡಾ. ಪಿ.ವಿ. ಪ್ರೇಮಲತಾ ಭಾಗವಹಿಸುವರು ಎಂದರು.
ವಿಜಯಲಕ್ಷ್ಮೀ ಹಿರೇಮಠ್, ಉಷಾ ಗುರುರಾಜ್ ಮೈದೂರು, ಜಯಶ್ರೀ ದೇಸಾಯಿ, ಮಂಜುಳಾ, ಗೀತಾ ಜೋಷಿ, ವಿಶ್ವ ಹಿಂದೂ ಪರಿಷತ್ನ ಮುಖಂಡ ನರಸಿಂಹ ಮೂರ್ತಿ ಗೋಷ್ಠಿಯಲ್ಲಿದ್ದರು.