ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಮಾಯಣ ನಮ್ಮ ಸಂಸ್ಕೃತಿಯ ಪ್ರತೀಕ: ಕೊತ್ಲಮ್ಮ

Mainashree
Updated On : 19 Oct 2013, 11:17 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 18
ರಾಮಾಯಣ ಮಹಾಕಾವ್ಯ ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಇಡೀ ಜಗತ್ತಿಗೆ ಮಾರ್ಗದರ್ಶಿಯಾಗಿದೆ ಎಂದು ಸರ್ಕಾರಿ ಪಪೂ ಕಾಲೇಜು ಉಪ ಪ್ರಾಚಾರ್ಯೆ ಡಾ. ಟಿ. ಕೊತ್ಲಮ್ಮ ಹೇಳಿದರು.
ಅವರು ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರದಲ್ಲಿ ವಿಶೇಷ ಉಪನ್ಯಾಸ ನೀಡಿ, ರಾಮಾಯಣದಲ್ಲಿ ಸಹೋದರತೆ, ಮಾನವೀಯತೆ, ಸಹಕಾರ, ಪಾವಿತ್ರ್ಯ ಮೇಳೈಸಿದೆ. ಮಾನವೀಯ ಮೌಲ್ಯಗಳ ಸಂಗಮ ರಾಮಾಯಣದಲ್ಲಿದ್ದು, ಇದರ ಸಾರದಿಂದ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆಯಿಂದ ನಡೆದಾಗ ಮಾತ್ರ ಮಹಾತ್ಮರ ಸ್ಮರಣೆ ಸಾರ್ಥಕ ಎಂದರು.
ವಾಲ್ಮೀಕಿ ಮುಖಂಡ ಕೆ. ಮಲ್ಲಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪುರಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಮೈಲೇಶ್ ಬೇವೂರ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸದಸ್ಯರಾದ ಸಾವಿತ್ರಮ್ಮ, ಮೀನಾಕ್ಷಮ್ಮ, ತಹಸೀಲ್ದಾರ್ ಜವರೇಗೌಡ, ಬಿಇಒ ಎಂ.ಆರ್. ಮಂಜುನಾಥ, ಇಒ ಸೈಯದ್ ಹಜರತ್‌ಷಾ, ಸಮಾಜ ಕಲ್ಯಾಣಾಧಿಕಾರಿ ಬಿ.ಎನ್.ಎಂ. ಮೂರ್ತಿ, ಗುಪ್ಪಾಲ ರಾಘವೇಂದ್ರ, ಎಸ್. ದುರುಗೇಶ್, ಚೌಡಪ್ಪ, ಎನ್. ಮುದ್ದಪ್ಪ, ಕಾವಲ್ಲಿ ಶಿವಪ್ಪ ನಾಯಕ, ಬಿ. ಭೀಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಪಿ. ಮಂಜುನಾಥ ನಾಯಕ, ಸಿ.ಬಿ. ಜಯರಾಂ ನಾಯಕ, ಜಿಪಂ ಮಾಜಿ ಸದಸ್ಯ ಸೋಮಪ್ಪನಾಯಕ, ಅಂಗಡಿ ಸಿದ್ದಣ್ಣ, ಪಿ. ಪದ್ಮಾ, ಬಿ.ಕೆ. ಜಯಮ್ಮ, ಬಿ. ಶಿವಕುಮಾರಿ, ಬೊಮ್ಮಗಟ್ಟೆ ಪಂಪಾಪತಿ, ಮಾಳಿಗೆ ಆನಂದ, ಸಿ.ಬಿ. ಸಿದ್ದೇಶ್, ಸಿ.ಬಿ. ಮಂಜುನಾಥ, ಕೆ. ಈಶಪ್ಪ, ಕಾಟೇರ ಹಾಲೇಶ್, ಬ್ಯಾಳಿ ವಿಜಯಕುಮಾರಗೌಡ, ಹಿರೇಕುಂಬಳಗುಂಟೆ ಉಮೇಶ್, ಜಿ. ಹನುಮಂತಪ್ಪ, ಹೊನ್ನಪ್ಪ, ಬಿ. ಮರಿಯಪ್ಪ, ವಿಭೂತಿ ವೀರಣ್ಣ, ಸೌಭಾಗ್ಯಮ್ಮ, ಎಚ್. ಕುಮಾರ್, ಜಂಬಣ್ಣ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ವಾಲ್ಮೀಕಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ತಹಸೀಲ್ದಾರ್ ಜವರೇಗೌಡ ಚಾಲನೆ ನೀಡಿದರು. ಅನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವರನ್ನು, ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement