ವಾಲ್ಮೀಕಿ ಮಹಾನ್ ದಾರ್ಶನಿಕ: ವಿಜಯಕುಮಾರ್
ಹೂವಿನಹಡಗಲಿ: ರಾಮಾಯಣದ ಮೂಲಕ ಪ್ರಸ್ತುತ ಸಮಾಜಕ್ಕೆ ಧರ್ಮಶಾಸ್ತ್ರದ ಜೀವನ ಪದ್ಧತಿಗಳನ್ನು ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಆದಿಕವಿ ವಾಲ್ಮೀಕಿ ಮಹರ್ಷಿ ಕೇವಲ ಜಯಂತಿಗೆ ಸೀಮಿತವಾಗದೆ ನಿತ್ಯ ನೆನೆಯುತ್ತಾ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಎ.ಬಿ. ವಿಜಯಕುಮಾರ ತಿಳಿಸಿದರು.
ಪಟ್ಟಣದ ಶ್ರೀ ತೇರು ಹನುಮಪ್ಪ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ತಾಲೂಕಾಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ವಿಶ್ವಮಾನವರಾಗಿದ್ದಾರೆ ಎಂದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಮಂಜುನಾಥ ಬೇವಿನಕಟ್ಟಿ, ಜಿಪಂ ಸದಸ್ಯ ಜಿ. ವಸಂತ ಮಾತನಾಡಿದರು. ತಾಪಂ ಅಧ್ಯಕ್ಷೆ ಶಿಲ್ಪಾ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ರಾಜೇಂದ್ರಗೌಡ, ಸದಸ್ಯೆ ಹೊನ್ನಮ್ಮ ತಳವಾರ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್‌ಮೊಹಿದ್ದೀನ್, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎ.ಜಿ. ಹೊನ್ನಪ್ಪನವರ್, ಗೌರವಾಧ್ಯಕ್ಷ ಯು. ಹನುಮಂತಪ್ಪ, ಪುರಸಭೆ ಸದಸ್ಯರಾದ ಯು. ಹನುಮಂತಪ್ಪ, ಯು. ಲಲಿತಮ್ಮ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ಬಂಜಾರ ಸಮಾಜದ ಅಧ್ಯಕ್ಷ ಹೋಬ್ಯಾನಾಯ್ಕ, ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕೆ. ಹುಚ್ಚೆಂಗೆಪ್ಪ, ಚಲವಾದಿ ಸಮಾಜದ ಅಧ್ಯಕ್ಷ ಮೈಲಾರ ಹೊನ್ನಪ್ಪ, ಎ. ಅಕ್ಬರ್, ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಎ. ಕೊಟ್ರಗೌಡ, ಜಯದೇವಯ್ಯ, ಡಿ. ಮಂಜಣ್ಣ ಇತರರು ಇದ್ದರು.
ಎ. ಕಾಳಪ್ಪ, ರೇಣುಕಾ ಸಂಗಡಿಗರು ಪ್ರಾರ್ಥಿಸಿದರು. ಆನಂದ ಡೊಳ್ಳಿನ ಸ್ವಾಗತಿಸಿದರು. ಜೆ. ಪರುಸಪ್ಪ ನಿರೂಪಿಸಿದರು. ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ನೆರವೇರಿತು. ವಾಲ್ಮೀಕಿ ಯುವಸೇನೆಯ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.