ವಾಲ್ಮೀಕಿ ಸಮಾಜದ ಅಭಿವೃದ್ಧಿಯಾಗಲಿ: ಹಾಲಮ್ಮ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 18
ವಾಲ್ಮೀಕಿ ಸಮಾಜದ ಸಂಘಟನೆಯನ್ನು ಬಲಪಡಿಸುವ ಮೂಲಕ ಸಮಾಜವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಮಹಿರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಪ್ರದವಿ ಕಾಲೇಜು ಪ್ರಾಚಾರ್ಯ ಡಾ. ಕೆ. ಪನ್ನಂಗಧರ ಮಾತನಾಡಿ, ವಾಲ್ಮೀಕಿ ದಾರ್ಶನಿಕ ವಿಚಾರಗಳ ಬಗ್ಗೆ ಸಮಾಜದಲ್ಲಿ ಕ್ರಾಂತಿ ಉಂಟು ಮಾಡಬೇಕಾಗಿದೆ. ವಾಲ್ಮೀಕಿ ಸಂದೇಶಗಳು ಪ್ರಸ್ತುತ ಎಂದು ಹೇಳಿದರು.
ಸಹಾಯಕ ಆಯುಕ್ತ ಪಿ. ಸುನೀಲ್‌ಕುಮಾರ್, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ಮಾತನಾಡಿದರು. ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶಿವರಾಮ್ ಗುಜ್ಜಲ್ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಗುಜ್ಜಲ್ ರಾಘವೇಂದ್ರ, ನಾಣಿಕೇರಿ ತಿಮ್ಮಯ್ಯ, ಜಂಬಾನಹಳ್ಳಿ ವೆಂಕೋಬಣ್ಣ, ತಾರಿಹಳ್ಳಿ ಹುಲುಗಜ್ಜಪ್ಪ, ಬ್ಯಾಲಾಳ ಪಂಪಾಪತಿ, ಬೆಲಗೋಡು ಹನುಮಂತಪ್ಪ, ರುದ್ರಪ್ಪ, ಹನುಮಂತಪ್ಪ, ಯಲಪ್ಪ, ಉಮೇಶ್ ಗುಜ್ಜಲ್, ಗುಜ್ಜಲ್ ಶ್ರೀನಿವಾಸ, ಕಿಚಿಡಿ ಶ್ರೀನಿವಾಸ, ಪಿ. ವೆಂಕಟೇಶ್, ಸುದರ್ಶನ ನಾಯಕ, ಎಸ್. ಬಸವರಾಜ, ಗುಡಿಗುಂಟೆ ಮಲ್ಲಿಕಾರ್ಜುನ, ಗುಜ್ಜಲ್ ನಿಂಗಪ್ಪ, ಗಿಂಜಿ ನಿಂಗಪ್ಪ, ಕಣ್ಣಿ ಉಮಾದೇವಿ ಶ್ರೀಕಂಠ, ವೇಣುಗೋಪಾಲ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ತಾಪಂ ಇಒ ರಮೇಶ್ ತಳವಾರ್, ನಗರಸಭಾ ಪೌರಾಯುಕ್ತ ಮಹಮ್ಮದ್ ಮುನಿರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಷಿ, ಬಿಇಒ ಪಿ. ಸುನಂದಾ, ಸಿಪಿಐ ಎಸ್.ಕೆ. ಪ್ರಹ್ಲಾದ್ ಭಾಗವಹಿಸಿದ್ದರು.